ಬರೆಯುತ್ತಾ ಹೋದಂತೆ ಮುಗಿಯದ ಮನದಾಳದ ಕವಿತೆ...

ಬರೆಯುತ್ತಾ ಹೋದಂತೆ ಮುಗಿಯದ ಮನದಾಳದ ಕವಿತೆ...

ಬೀದರಿನ ಆತ್ಮೀಯ ಸ್ವಾಗತ,

ಕಲಬುರಗಿಯ ಪ್ರೀತಿಯ ಬೀಳ್ಕೊಡುಗೆ,

ಯಾದಗಿರಿಯ ಮಮತೆಯ ಆತಿಥ್ಯ,

ರಾಯಚೂರಿನ ಸುಂದರ ಸಂವಾದ,

ವಿಜಯಪುರದ ಸೊಬಗಿನ ಸುತ್ತಾಟ,

ಬಾಗಲಕೋಟೆಯ ಶರಣ ಸತ್ಕಾರ,

ಬೆಳಗಾವಿಯ ಬೆರಗಿನ ದೀರ್ಘ ಪಯಣ,

ಧಾರವಾಡದ ದಾರ್ಶನಿಕ ನೋಟ,

ಗದಗಿನ ಗಾನ ಮಾಧುರ್ಯ,

ಕೊಪ್ಪಳದ ಆಲಿಂಗನ,

ಬಳ್ಳಾರಿಯ ಬಿಸಿಲ ಬೇಸಿಗೆ,

ವಿಜಯನಗರದ ಶಿಲ್ಪಕಲೆ,

ಹಾವೇರಿಯ ಪುಣ್ಯ ಭೂಮಿ,

ಉತ್ತರ ಕನ್ನಡದ ಕಾನನದ ಗಾಂಭೀರ್ಯ,

ಶಿವಮೊಗ್ಗದ ಪರಿಸರ ಪ್ರೇಮ,

ದಾವಣಗೆರೆಯ ದಣಿವರಿಯದ ಪ್ರೋತ್ಸಾಹ,

ಚಿತ್ರದುರ್ಗದ ಚಿತ್ರ ವಿಚಿತ್ರಗಳು,

ಚಿಕ್ಕಮಗಳೂರಿನ ಮಳೆಯ ಮುತ್ತಿಗೆ,

ಉಡುಪಿಯ ಸಮುದ್ರ ತೀರದ ಅಲೆಗಳು,

ದಕ್ಷಿಣ ಕನ್ನಡದ ಕಣ್ಮನ ತಣಿಸುವ ತುಂತುರು ಹನಿಗಳು,

ಕೊಡಗಿನ ಪ್ರಾಕೃತಿಕ ಸೌಂದರ್ಯ,

ಹಾಸನದ ಮಲೆನಾಡಿನ ಸೊಬಗು,

ತುಮಕೂರಿನ ತೆಂಗಿನ ಘಮಲು,

ಚಿಕ್ಕಬಳ್ಳಾಪುರದ ಹಾಲಿನ ಹೊಳೆ,

ಕೋಲಾರದ ಮಾವಿನ ಫಸಲು,

ಬೆಂಗಳೂರು ಗ್ರಾಮಾಂತರದ ಸ್ವಂತಿಕೆ

ಬೆಂಗಳೂರು ನಗರದ ಭವ್ಯತೆ,

ರಾಮನಗರದ ರೇಷ್ಮೆ...

ಮಂಡ್ಯ, ಮೈಸೂರು, ಚಾಮರಾಜನಗರದ ನಿರೀಕ್ಷೆ....

ಪದಗಳು ವಾಕ್ಯಗಳು ಕೇವಲ ಸಾಂಕೇತಿಕ, 

ಭಾವಗಳು ಮಾತ್ರ ಸರ್ವವ್ಯಾಪಿ ಮತ್ತು ಶಾಶ್ವತ.

ನಡಿಗೆ ಎಂಬ ಧ್ಯಾನಸ್ಥ ಸ್ಥಿತಿಯಲ್ಲಿ ಪ್ರತಿ ಕ್ಷಣಗಳನ್ನು ಅನುಭವಿಸುತ್ತಾ ಸಾಗುವಾಗ ಕಲ್ಲುಮುಳ್ಳಿನ ಹಾದಿಗೆ ಹೂವು ಚೆಲ್ಲಿ ಮನೆಗೆ ತಲುಪಿಸಿದ ಕನ್ನಡದ ಮನಸ್ಸುಗಳು ಇಂದಿಗೂ  ಕನಸಿನ ಅರಮನೆಯ ಒಡೆಯರು. ಅವರೆಲ್ಲರಿಗೂ ತುಂಬಾ ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತಾ… 

ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ಹೀಗೊಂದು ನೆನಪುಗಳ ಬುತ್ತಿಯನ್ನು ಸದಾ ಒಡಲೊಳಗೆ ಬಿಚ್ಚುತ್ತಲೇ ಇರುತ್ತದೆ. ಇಟ್ಟ ಪ್ರತಿಯೊಂದು ಹೆಜ್ಜೆಗಳು ಒಂದೊಂದು ‌ಕವಿತೆಗಳಾಗಿ ಮನದೊಳಗೆ ಮೂಡುತ್ತಲೇ ಇದೆ. ಮುಂದೆ ಇನ್ನಷ್ಟು ಮತ್ತಷ್ಟು ಪ್ರಯತ್ನಗಳ ಕನಸಿನೊಂದಿಗೆ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ