ಬರ್ತಾನೇನು ನೋಡಾಕ...?

ಬರ್ತಾನೇನು ನೋಡಾಕ...?

ಕವನ

ಬೇಯ್ಲೀಕೇನು ಇಟ್ಟೇಯವ್ವ

ಒಲೆಯ ಮ್ಯಾಗೆ

ಅಕ್ಕೀ ತುಂಬಿ ಇಟ್ಟೇಯೇನು

ಪಾತ್ರೇನಾಗೆ

 

ಊಟಕ್ಕೆಂದು ಬಂದಾರೇನು

ಹಸಿವಿನಾಗೆ

ತಟ್ಟೇ ಇಟ್ಕೊಂಡ್ ಕೂತವ್ರೇನು

ಸಾಲಿನಾಗೆ

 

ಸೌದೆ ತುಂಡು ಇಟ್ಟೇಯಲ್ಲ

ಒಲೆಯ ಒಳಗೆ

ಏನು ಯೋಚ್ನೆ, ಉರಿಯ ಹಚ್ಚು

ಉರಿಸು ಕಟ್ಗೆ

 

ರೇಷ್ಮೆ ಲಂಗ ಕೆಂಪು ರವಿಕೆ

ಯಾಕ ಈಗ?

ಮಲ್ಲೆ ಮಾಲೆ ಇಟ್ಟೆಯಲ್ಲೆ

ತುರುಬಿನಾಗ

 

ನೋಡಕಂತ ಬರ್ತಾನೇನು

ಪ್ಯಾಟೆ ಹುಡುಗ

ನಿನ್ನ ನೋಡಿ ಹೇಳ್ತಾನವನು

ಬಾರೆ ಬೇಗ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್