ಬರ್ತ-ಮಾಯ್ಸರ ಹರಟೆ !!

ಬರ್ತ-ಮಾಯ್ಸರ ಹರಟೆ !!

ಬರಹ

ಬರ್ತ-ಮಾಯ್ಸರ ಹರಟೆ
-----------
ಮಾಯ್ಸ: ಏನಣ್ಣ, ಬರ್ತಣ್ಣ ಏನ್ ಪತ್ತೇನೆ ಇಲ್ಲ. ಎಲ್ಗೆ ಓಗಿದ್ದಣ್ಣ?
ಬರ್ತ:  ಇದ್ಯಾಕಣ್ಣ ನಾನು ನಿಂಗೆ ದೂರುಲಿ ಮಾಡಿರ್ನಿಲ್ವ  ಕಿಸುವೊಳಲಿಂದ. ಯೋಳಿದ್ನಲ್ಲಪ್ಪ ತಿರುಳ್ಗನ್ನಡ ನಾಡು,ಬೇಂದ್ರೆ ನಾಡು ಸುತ್ತಕ್ಕೆ ಹೊಂಟಿವ್ನಿ ಅಂತ. ನೀನೊಳ್ಳೆ
ಮಾಯ್ಸ: ಹೂಂ. ಈಗ ಗೆಪ್ತಿ ಬಂತು. ಎಂಗಯ್ತಣ್ಣ ನಮ್ ಪುಲಿಕೇಸಿ ಆಳಿದ ನೆಲ ?
ಬರ್ತ: ಚಂದಾಗೈತೆ. ಏನ್ ಗವಿ, ಏನ್ ಗುಡಿಗಳು. ಬದುಕಿದ್ ಮ್ಯಾಕೆ ಒಂದ್ ಕಿತ ನೋಡ್ಲೆ ಬೇಕು ಕಣಣ್ಣ. ಅಂಗೆ ಗವಿಗಳ್ನೇ ಕೊರದ್ಬುಟ್ಟವ್ರೆ ಕಣಣ್ಣ. ಆಗಿನ ಕಾಲ್ದಾಗೆ  ನಮ್ಮವ್ರು (ಕನ್ನಡಿಗರು) ಬೊ ಸಂದಾಕ್ ಕೆಲ್ಸ ಮಾಡೋರೆ. ನಾವು ಇವುನ್ನೆಲ್ಲ ನೋಡ್ ಕಲತ್ಕಬೇಕು.
ಮಾಯ್ಸ: ಅದಿರ್ಲಿ ಕಣಣ್ಣ. ಅದೆಲ್ಲೆಲ್ಲಿ ಓಗಿದ್ದೆ ಅಂತ ವಸಿ ಬಿಡ್ಸಿ ಯೋಳ್ಬಾರ್ದ ಅಂತಿನಿ. ನೀ ಒಳ್ಳೆ ಬಾಶ್ಣ ಬಿಗೀತ ಕುಂತ್ಕಬುಟ್ಟಲ್ಲ
ಬರ್ತ: ಯೋಳ್ತಿನಿ ಇರಣ್ಣ. ಮೊದಲು ಪಟ್ಟದಕಲ್ಲಿಗೆ ಹೋಗಿದ್ದೆ. ಇದರ ಅಳೆ ಯೆಸರು 'ಕಿಸುವೊಳಲು' ಅಂತ. ಕಿಸು ಅಂದ್ರೆ ಕೆಂಪು ಹೊಳಲು ಅಂದ್ರೆ ಪಟ್ಟಣ/ನಗರ. ಅಲ್ಲಿ ಕೆಂಪ್ ಕಲ್ಗೊಳು ಮಸ್ತನಾಗೆ ಅವಂತೆ. ಅದಕ್ಕೆ ಆ ಯೆಸರು ಬಂದಿರದು. ಅಲ್ಲಿ ಕಲ್ನಾಗೆ ಅಂಗೆ ವತ್ತಟಿಯಿಂದ(ಒಂದ್ ಕಡೆಯಿಂದ) ಕೆತ್ತಬುಟ್ಟವ್ರೆ. ಇದು ಇಂತ ವೊಳಲಾಗಿತ್ತು, ಇಲ್ಲಿ ಇಂತಿಂತವರು ಅಱ(ದಾನ) ಕೊಟ್ಟಿದ್ರು ಗುಡಿಗೊಳ್ನ ಕಟ್ಸದುಕ್ಕೆ. ಬಸಿರ್ಗುಡಿ(ಗರ್ಬಗುಡಿ) ಕಟ್ದವನು ಇಂತವನು ಕಯ್ಸಾಲೆ ಕಟ್ದವ್ನು ಇಂತವನು. ಇಂತವ್ನು ಮುಂದಾಳತ್ವ  ವಯಿಸ್ಕಂಡಿದ್ದ ಅಂತ. ಅಲ್ಲಿ ಇಲ್ಲ ಅಂದ್ರೂ ಅಯ್ದಾರು ಗುಡಿಗಳವೆ ಕಣಣ್ಣ. ಅದ್ರಲ್ಲಿ ಒಂದು ಇಸ್ಯ ನಾಮ್(ನಾವು) ಗೆಪ್ತಿ ಇಟ್ಕಬೇಕು ನೋಡ್ ಮತ್ತೆ.
ಮಾಯ್ಸ: ಅದೇನಪ್ಪ ಅಂತಾ ಇಸ್ಯ
ಬರ್ತ: ಅಲ್ಲಿ ನಮ್ಮ ತೆಂಕು(ದ್ರಾವಿಡ) ಬಗೆಯಲ್ ಗುಡಿ ಕಟ್ಟವ್ರೆ ಮತ್ತು ಬಡಗು(ಆರ್ಯನ್) ಬಗೆಯಲ್ಲೂ ಗುಡಿ ಕಟ್ಟವ್ರೆ ಮತ್ತೆ ಇವೆಲ್ಲದ್ರ ನಡು ಗೆಲ್ಕಂಬ(ವಿಜಯ ಸ್ತಂಬ)ಬೇರೆ ನೆಟ್ಟವ್ರೆ  ಅದ್ರ್ ಮ್ಯಾಗು ಅಂಗೆ ಅಳೆಗನ್ನಡದಾಗೆ ಅಂಗೆ ಕೆತ್ಬುಟ್ಟವ್ರೆ. ಇವುನ್ನೆಲ್ಲ ನೋಡ್ಬುಟ್ಟು ನಂಗೆ ವಸಿ ಬೇಜಾರ್ ಆಯ್ತಪ್ಪ.
ಮಾಯ್ಸ: ಇದೇನಣ್ಣ ಇಂಗತ್ತೀಯ.
ಬರ್ತ: ಹೂಂ, ಮತ್ತೆ. ಒಂದೂ..ಅವುನ್ನೆಲ್ಲ ನೋಡಕ್ಕೆ ಬಂದಿದವ್ರಲ್ಲಿ ಹೆಚ್ಚು ಬಿಳಿಯರೆ(ಹೊರದೇಸಿಗಳೇ). ನಮ್ ದೇಸ್ ದವರಿಗೆ ಅವ್ರಿಗೆ ಇರ ಅಶ್ಟು ಹುರುಪಿಲ್ವಲ್ಲ ಅಂತ  ಎರಡು, ಅಲ್ಲಿ ಬರೆದಿರದ್ನೆಲ್ಲ ಓದಕ್ಕೆ ಆಗಕಿಲ್ವಲ್ಲ ಅಂತ.
ಮಾಯ್ಸ: ಇರಲಿ. ಇಂಗೆ ನಡು ಬ್ಯಾಸರ ಮಾಡ್ಕೋಬೇಡ. ಅದೇನ್ ಯೋಳ್ತಿದ್ದೊ ಅದನ್ನೇ ಮುಂದ್ವರೆಸು
ಬರ್ತ: ಈ ಕಿಸುವೊಳಲು ಅಂತಿಂತದಲ್ಲಪ್ಪ.. ಕವಿರಾಜಮಾರ್ಗದಾಗೆ ಇದನ್ನ ತಿರುಳ್ಗನ್ನಡ ನಾಡಿನ ಒಂದು ಗಡಿ ಅಂತ ಗುರುತ್ಸವ್ರೆ.
ಮಾಯ್ಸ: ಅದು ನಂಗೂ ಗೊತ್ತು. ಅದಕ್ಕೆ ಪಟ್ಟದಕಲ್ಲು ಅಂತ್ಯಾಕೆ ಯೆಸರ್ ಬಂತು ?
ಬರ್ತ: :( ಓ ಅದಾ. ನಾನ್ ತಿಳಿದ್ಕೊಂಡ ಮಟ್ಟಿಗೆ ಬಾದಮಿನೇ ನಮ್ ಚಾಲುಕ್ಯರ ಅರಸೊಳಲು(ರಾಜಧಾನಿ). ಆದ್ರೆ ಅಲ್ಲಿ ಯಾವ್ ಹೊಳೆನೂ ಪಕ್ಕದಲ್ಲಿ ಹರಿಯಾಕಿಲ್ಲ  ಅದ್ರೆ ಪಟ್ಟದಕಲ್ಲಿನಾಗೆ ಪಕ್ಕದಲ್ಲೆ ನೆಮ್ಮದಿಯಿಂದ ಮಲಪ್ರಬೆ(ಮಲ್ಲಪ್ರಬೆ) ಹರೀತಾಳೆ. ಅದು ತೆಂಕಿನಿಂದ ಬಡಗಿಗೆ. ಅಲ್ಲಿನ ಗೈಡ್ ಯೋಳ್ದಂಗೆ ಇದೊಂದೆ ಅಂತೆ ತೆಂಕಿನಿಂದ ಬಡಗಿನ ಕಡೆ ಹರಿಯೋದು. ಅದಕ್ಕೆ ಇಲ್ಲೇ ಬಂದು ಚಾಲುಕ್ಯರು ಪಟ್ಟ ಮಾಡ್ಸಕಂಡ್ ಓಗ್ತಾ ಇದ್ರಂತೆ. ಅವರಂತೆ ರಟ್ಟಕೂಟರು ಮತ್ತು ಇನ್ನಿತರ ಅರಸರು ಇಲ್ಲೆ ಪಟ್ಟ ಮಾಡ್ಸಕಳ್ಳಕೆ ಸರಿಯಾದ ತಾಂವ ಅಂತ ಇಲ್ಲೆ ಬರ್ತ ಇದ್ರಂತೆ.
ಮಾಯ್ಸ: ಓ ....ಅಂಗ  :)

.......ಮುಂದುವರಿಯುವುದು