ಬಲು ಸರಳ ಕನ್ನಡ ಕಲಿಯಬೇಕು ನೀ ಕನ್ನಡ
ನಮ್ಮ ನಾಡು ಕನ್ನಡ
ನಮ್ಮ ಭಾಷೆ ಕನ್ನಡ
ನಮ್ಮ ಉಸಿರು ಕನ್ನಡ
ನಮ್ಮ ಹೆಸರೂ ಕನ್ನಡ
ಹೇಳಿ ಹೇಳಿ ಕನ್ನಡ
ಹಾಡಿ ಹಾಡಿ ಕನ್ನಡ
ಹಾಲು ಜೇನು ಕನ್ನಡ
ಒಳ್ಳೆ ರುಚಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ
ಗಂಧದ ಗುಡಿ ಕನ್ನಡ
ಅಂದದ ಬೀಡು ಕನ್ನಡ
ಚೆಲುವ ನಾಡು ಕನ್ನಡ
ಸಮೃದ್ಧಿ ನಾಡು ಕನ್ನಡ
ನನ್ನಲಿ ಕನ್ನಡ
ನಿನ್ನಲ್ಲಿ ಕನ್ನಡ
ಅವರಲ್ಲಿ ಕನ್ನಡ
ಇವರಲ್ಲಿ ಕನ್ನಡ
ಕೋಗಿಲೆ ಧ್ವನಿ ಕನ್ನಡ
ಸಾಹಿತ್ಯ ಊರು ಕನ್ನಡ
ಕವಿ ಪುಂಗವ ಕನ್ನಡ
ಕಾವ್ಯ ಕುಸುಮ ಕನ್ನಡ
-ಎಚ್.ವ್ಹಿ.ಈಟಿ. ಶಿಕ್ಷಕರು, ಸಾ.ನರೇಗಲ್ಲ
***
ಒಂದು ಗಝಲ್
ಕವಿತೆಗೆ ಮುನ್ನುಡಿ ಬರೆದವಳು ಕಥೆಯಾಗಿ ಮಸಣ ಸೇರಿದಳೇಕೆ ಹೇಳು
ಭಾವನೆಯ ಬಂಗಾರ ಗುಣದವಳು
ಶವವಾಗಿ ಚಿತೆಯ ಏರಿದಳೇಕೆ ಹೇಳು||
ಕುಪ್ಪಳಿಸಿ ನೆಗೆದು ಆಕಾಶಕೆ ಜಿಗಿಯುವ
ಹದಿಹರಯವೇ ಮುಳ್ಳಾಯಿತೇ
ಅಪ್ಪಳಿಸಿದ ಸಂಕಟಗಳ ಜಾಲದಲಿ
ಮುಗ್ದೆಯಂತೆ ಮುಳುಗಿ ಅಳಿದಳೇಕೆ ಹೇಳು ||
ಎದೆಯ ಬಾಂದಳದಿ ಉಕ್ಕಿಬಂದ
ಅಲೆಗಳ ಅಬ್ಬರದ ಚಲ್ಲಾಟದ ಪ್ರಮಾದವೇ
ಸುಧೆಯ ಹಾಲಿಗೆ ಹುಳಿ ಬೆರೆತು ನಶಿಸಿದಂತೆ ಬಾಳಲಿ ಜಾರಿದಳೇಕೆ ಹೇಳು ||
ಸುಡುವ ವ್ಯಥೆಯ ಒಳಗೊಳಗೆ
ಮುಚ್ಚಿಟ್ಟವಳು ಇಂದು ಗೂಡು ಬಿಟ್ಟಳಲ್ಲ
ಪಡೆದ ಪತಿಯ ನುಡಿಯ ಆಲಿಸದೆ
ಕಟ್ಟಪ್ಪಣೆಯ ಎಲ್ಲೆ ಮೀರಿದಳೇಕೆ ಹೇಳು ||
ಅವನಿಯ ಹೆಂಗಳೆಯರಿಗೆ ಜೀವನದಿ
ಅವಶ್ಯವು ಬೆಟ್ಟದಷ್ಟು ಸಹನೆಯು
ಸವಿನಯ ಬಿಜಲಿ ಅರಸದೆ ಆತುರದಿ
ಪೊಡವಿಯ ಒಡಲಲಿ ತೂರಿದಳೇಕೆ ಹೇಳು ||
-ಈರಪ್ಪ ಬಿಜಲಿ ಕೊಪ್ಪಳ