ಬಲೆ ಹೆಣೆಯುವ ಕಡ್ಡಿ ಹುಳು

ಬಲೆ ಹೆಣೆಯುವ ಕಡ್ಡಿ ಹುಳು

ಬರಹ

ಈ ಹಿಂದೆ ಬಲೆ ಹೆಣೆಯದ ಜೇಡದ ಬಗ್ಗೆ ಬರೆದಿದ್ದೆ. ಈಗ ನೋಡಿ ಇಲ್ಲಿ ಕೊಟ್ಟಿರುವ ಚಿತ್ರದಲ್ಲಿರುವ ಹುಳು ಸುಮಾರು ೧ ಇಂಚು ಉದ್ದ ಇದ್ದು, ಜೇಡದಂತೆ ತಾನೂ ಬಲೆ ಹೊಸೆಯುತ್ತದೆ. ಆದರೆ ವೃತ್ತಾಕಾರದಲ್ಲಿ ಅಲ್ಲ, ಉದ್ದುದ್ದವಾಗಿ ಹೆಣೆದು ಜೋತು ಬಿದ್ದ ಆ ದಾರದ ಮೇಲೆ ಪಳಗಿದ ಸರ್ಕಸ್ ಕಲಾವಿದನಂತೆ ಮೇಲಕ್ಕೂ ಕೆಳಕ್ಕೂ ಓಡಾಡುತ್ತಾ ಹಾಗೆಯೇ ಲೋಲಕದಂತೆ ಗಾಳಿಯ ಹೊಡೆತಕ್ಕೆ ಸಿದ್ದು ಅಡ್ಡಡ್ಡಲಾಗಿಯೂ ಓಲಾಡುತ್ತಾ ಮಿಕವನ್ನು ಕಂಡಕೂಡಲೆ ಅದರತ್ತ ಬಾಗುವ ಈ ಹುಳುವನ್ನು ನಾನು ನನ್ನ ಜೀವನದಲ್ಲಿ ಕಂಡಲ್ಲಿ ಇದೇ ಮೊದಲು. ನಮ್ಮ ಮನೆಯ ಮುಂದಿನ ಗೇಟಿಗೇ ಹೊಂದಿಕೊಂಡಂತಿರುವ ಮರದ ಕೆಳಗಿನ ಕೊಂಬೆಯಿಂದ ಸುಮಾರು ೪-೫ ಅಡಿ ಉದ್ದದ ದಾರವನ್ನು ಹೊಸೆದು ಆಟವಾಡುತ್ತಿದ್ದ ಈ ಹುಳದ ಗಮ್ಮತ್ತನ್ನು ನೋಡಿ ಆನಂದವಾಯಿತು. ಆ ಆನಂದವನ್ನು ಸಂಪದೋದುಗರಿಗೂ ಕೊಡೋಣವೆಂದು ಈ ಚಿಕ್ಕ ಚಿತ್ರಲೇಖನ. ಈ ಹುಳುವಿನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ತಿಳಿದವರು ತಿಳಿಸಿದರೆ ಸಂತೋಷ. ಅಂದಹಾಗೆ ಅದರ ಓಲಾಟದ ಚಿತ್ರವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದೇನೆ. ೪.೫ ಎಂಬಿ. ಅದನ್ನು ಸಂಪದದಲ್ಲಿ ಹೇಗೆ ಹಾಕುವುದೆಂದು ತಿಳಿಸಿದರೆ ಏರಿಸುತ್ತೇನೆ.