ಬವಣೆ ....ಜಲ ಚಿನ್ನ್ಹೆಯಾಗದಿರಲಿ!
ಕವನ
ಕತ್ತಲ ಗುಹೆಯೊಳಗೆ
ಕಲ್ಲು ಹೊಡೆದಂತೆ
ಬರುವ ಕಷ್ಟಕೋಟಲೆ ದಂಡು
ಕಾಣುತಿದೆ ನೀರ್ಗಲ್ಲ ತುದಿಯಂತೆ
ಬೆದರಿಹುದು ಈ ಮನವು
ಎಲ್ಲಿ ಉಳಿವುದೋ ಬರಡು ಬವಣೆ
ಬಾಳ ಹಾದಿಯ ಪಯಣದಲಿ
ನಿರಂತರ ಜಲ ಚಿಹ್ನೆಯಾಗಿ
ಬಾನಿಂದ ಜಾರಿ ಬಂದ
ಹಿಮ ಅಗುಳಿನಂತೆ
ಕರಗಿ ಹೋಗಲಿ ದುಃಖ ದುಮ್ಮಾನ
ಹರಸು ಅನುದಿನ ದೇವ ಗುರುವೇ
ಓ ದೇವ ಗುರುವೇ, ಹರಸು ದೇವ ಗುರುವೇ!
ಶ್ರೀ ನಾಗರಾಜ್.