ಬಸ್ಯಾನ ಕತೆಗಳು ಭಾಗ ೧

ಬಸ್ಯಾನ ಕತೆಗಳು ಭಾಗ ೧

ಬರಹ

ಒಂದು ರಾತ್ರಿ, ಬಸ್ಯಾ ಕಂಟ್ರಿ ಶೆರೆ ಕುಡದು ತನ್ನ ಫಟ್ ಫಟಿ ಮ್ಯಾಲೆ ಝೋಲಿ ಹೊಡ್ಕೋತ ಹೊಂಟಿದ್ದಾ. ಅನುಮಾನ ಬಂದು ಟ್ರಾಫಿಕ್ ಪೋಲೀಸ್ ಅವನ್ನ್ ಹಿಡದು ನಿಲ್ಸಿದ. ಗಬ್ಬು ವಾಸನೆ ಹೊಡಿತಿದ್ರೂ ಬಸ್ಯಾ ಮಾತ್ರ ತಾ ಕುಡದೀನಿ ಅಂತ ಒಪ್ಪಗೊಳ್ಳಿಕ್ಕೆ ತಯಾರ ಇಲ್ಲ! ಯಾವ ಕುಡುಕಾ ಒಪ್ಗೋತಾನ್ರೀ ಹಂಗೆಲ್ಲ?
ಆದ್ರ ಪೋಲೀಸಣ್ಣ ಬಿಡಬೇಕಲ್ಲ, ಅವ್ನ ಉಸ್ರು ಪರೀಕ್ಷೆ ಮಾಡ್ಲಿಕ್ಕೆ ಹೋದ, ಬಸ್ಯಾ ಅದಕ್ಕ ಒಪ್ಪಲೇ ಇಲ್ಲ. ತನಗ ಅಸ್ತಮಾ ಅದ, ಅದಕ್ಕ ಆಗಂಗಿಲ್ಲ ಅಂದ. ರಕ್ತ ಪರೀಕ್ಷೆ ಮಾದ್ಸ್ತೀವಿ ಅಂದ್ರ ಅದಕ್ಕೂ ಎನೋ ಸಬೂಬು ಹೆಳೀದಾ. ಮೂತ್ರ ಪರೀಕ್ಷ್ಯಾ ಮಾಡ್ತೇನಿ ಅಂದ್ರ ತನಗ ಕಿಡ್ನಿ ಪ್ರೊಬ್ಲೆಮ್ ಅದ ಅಂತ ಬಚಾವಾದ.
ಕಡಿಗೆ ಪೋಲೀಸಣ್ಣ ಬ್ಯಾಸರಾಗಿ, ರೋಡಿನ ಮ್ಯಾಲೆ ಒಂದು ಸೀದಾ ಗೆರಿ ಎಳದು, ಇದರ ಮ್ಯಾಲೆ ಸೀದಾ ನಡದು ತೊರಸು ಅಂದ. ಆದರ ಬಸ್ಯಾ ಮಾತ್ರ ಖಡಾ ಖಂಡಿತವಾಗಿ ನಿರಾಕರಿಸಿ ಹೆಳಿದ "ಅದರ ಮ್ಯಾಲೆ ಸೀದಾ ನಡ್ಯುದು ಅಗಂಗಿಲ್ರೀ ಸಾಹೆಬ್ರ, ಯಾಕಂದ್ರ ನಾ ಕುಡದೇನಿ" ಅಂದ!. ಪೋಲೀಸಣ್ಣಗ ನಿಶೇ ಅಗೂದೊಂದ ಬಾಕಿ..!