ಬಹುದಿನದ ಬಯಕೆ

ಬಹುದಿನದ ಬಯಕೆ

ಕವನ

ಬಹುದಿನದ ಬಯಕೆಯದು ಮೂಡಿರಲು ನನ್ನೊಳಗೆ 

ಸುರಿಯೆ ನೀ ಎಲ್ಲಿ ಇಂದು 

ಕನಸುಗಳೇ ಕಂಡಿರಲು ನನಸದುವು ಬರದಿರಲು 

ಸೋತಿಹೆನು ನಿನ್ನ ನೆನೆದು 

 

ದಿನವೆಲ್ಲ ತಂಪಿರಲು ಪ್ರೀತಿಯದು ಸುಳಿದಿರಲು 

ಕಾಡುತಿದೆ ಮೋಹ ತನುವು

ಕೈಹಿಡಿದು ಕರೆದರೂ ಸನಿಹ ಬಾರದೆ ಹೋದೆ 

ನೋವ ನೀಡುತಲಿ ಹಸಿವ

 

ಮೋಡ ಮುಸುಕಿದ ಭಾವ ಹೃದಯ ತುಂಬಿರಲು

ಕಾಡುತಿದೆ ಸವಿಯ ಸಲ್ಲಾಪ 

ದೇಹ ಹಸಿವದು ದೂರ ಕೊಟ್ಟು ಹೋದೆಯೆ ನೀರೆ

ಶಯನದೊಳು ನಿನ್ನ ನೆನಪೆ

 

ಹೇಗೆ ಕಳೆಯಲಿ ದಿನವ ನೀನಿಲ್ಲದೇ ಮೌನ

ಒಲವಿರದೆ ಮೂಕನಾದೆ 

ತಪ್ಪು ಒಪ್ಪಿನ ನಡುವೆ ಸವಿಮುತ್ತ ಸುಖವಿರಲಿ

ಬಾಳು ಬೆಳಗುತ ಹಾಡೆ

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್