ಬಹು ಏಕಾಂಗಿಗಳು

ಬಹು ಏಕಾಂಗಿಗಳು

ಬರಹ

ಉದ್ಯನವನದಲ್ಲಿ ಎಲ್ಲಾ ಕಡೆ
ಬರೀ ಜೊಡಿಗಳು,
ಬಡಪಾಯಿ ದುಂಬಿಯನು
ಅಹ್ವಾನಿಸಿದವು ಹೂವುಗಳು|
ಆಕಾಶದೆಲ್ಲಿಡೆ ಮಿನುಗುತಿವೆ
ನೂರಾರು ತಾರೆಗಳು,
ಒಬ್ಬೊಂಟಿ ಚಂದ್ರನನು
ಸಂತೈಸುತಿದೆ ಭೂಮಿಕರುಳು|
ಕಡಲ ತೀರದಲಿ ಕಚ್ಚಿಕೊಂಡಿವೆ
ಪ್ರೇಮಿಗಳ ಮೈಮನಸ್ಸು,
ಏಕಾಂಗಿ ಸೂರ್ಯನ ಆರೈಸಿದೆ
ಮೋಡಗಳ ಚಲಿಸು-ಬಿರುಸು|
ಏಕಾಂಗಿ-ಒಂದಲ್ಲ,ಒಬ್ಬನಲ್ಲ,
ದುಂಬಿ,ಚಂದ್ರ,ಸೂರ್ಯ ಹೀಗೆ
ನಾವು ಬಹು-ಏಕಾಂಗಿಗಳು||