ಬಾಂಬೆ ಐಸ್ ಹಲ್ವಾ

ಬೇಕಿರುವ ಸಾಮಗ್ರಿ
ಸಕ್ಕರೆ-1 ಬಟ್ಟಲು, ಕರಗಿದ ತುಪ್ಪ-1/4 ಬಟ್ಟಲು, ಮೈದಾ-1/4 ಬಟ್ಟಲು, ಕೇಸರಿ ದಳ, ಬಾದಾಮಿ, ಗೋಡಂಬಿ ತುಂಡುಗಳು.
ತಯಾರಿಸುವ ವಿಧಾನ
ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾಡಿಸಿ. ಹತ್ತು ನಿಮಿಷ ಆದ ನಂತರ ಪ್ಯಾನ್ ತಳಬಿಟ್ಟು ಒಂದು ಉಂಡೆಯಂತೆ ಆದಾಗ ಬಟರ್ ಪೇಪರ್ ಮೇಲೆ ಹಾಕಿ ಸ್ವಲ್ಪ ನಾದಿ ತೆಳುವಾಗಿ ಲಟ್ಟಿಸಿ ಮೇಲೆ ಬಾದಾಮಿ ಗೋಡಂಬಿ ತುಂಡುಗಳನ್ನು ಹರಡಿ ಹಗುರವಾಗಿ ಲಟ್ಟಿಸಿ ಒಂದು ಗಂಟೆ ಆರಲು ಬಿಟ್ಟು ನಂತರ ಕತ್ತರಿಸಿ.
-ವೀಣಾ ಶಂಕರ್