ಬಾಗಲವಾಡದ ಗಿರಿಯೊಡೆಯ ಸ್ವಯಂವ್ಯಕ್ತ ಶ್ರೀ ಲಕ್ಷ್ಮೀ ವೆಂಕಟರಮಣ...

ಬಾಗಲವಾಡದ ಗಿರಿಯೊಡೆಯ ಸ್ವಯಂವ್ಯಕ್ತ ಶ್ರೀ ಲಕ್ಷ್ಮೀ ವೆಂಕಟರಮಣ...

ಬರಹ

ಸುಕ್ಷೇತ್ರ ಬಾಗಲವಾಡವು ಕರ್ನಾಟಕದಲ್ಲಿ ಹರಿದಾಸರ ನೆಲೆವೀಡಾದ ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಹರಿಕಥಾಮೃತಸಾರವನ್ನು ರಚಿಸಿದ ಶ್ರೀ ಜಗನ್ನಾಥದಾಸರಾಯರ ಜನ್ಮಸ್ಥಳವಾದ ಬ್ಯಾಗವಾಟ ಎಂಬ ಹಳ್ಳಿಯೂ ಇಲ್ಲೇ ಹತ್ತಿರದಲ್ಲಿದೆ. (೪ ಕೀ.ಮೀ.) ಒಮ್ಮೆ ಶ್ರೀ ಜಗನ್ನಾಥದಾಸರಾಯರ ತಾಯಿಗೆ ದೇಹಾಲಸ್ಯವಾಗಿ ಬ್ರಹ್ಮೋತ್ಸವದ ವೇಳೆಗೆ ತಿರುಪತಿಗೆ ಹೋಗಲು ಆಗದಿರಲು, ಸ್ವಾಮಿ ವೆಂಕಟರಮಣನು ಶ್ರೀ ದಾಸರಾಯರ ಪ್ರಾರ್ಥನೆಯಂತೆ ಬ್ರಹ್ಮೋತ್ಸವದ ಎಲ್ಲ ವೈಭವವನ್ನು ಬಾಗಲವಾಡದ ಗಿರಿಯ ಮೇಲೆಯೇ ತೋರಿಸಿದನಂತೆ.!!!! ಸ್ವಯಂ ವ್ಯಕ್ತನಾದ ಶ್ರೀ ಲಕ್ಷ್ಮೀ ವೆಂಕಟರಮಣನು ಇಂದಿಗೂ ಇಲ್ಲಿಯೇ ನಿಂತು ಭಕ್ತರ ಸರ್ವ ಅಭೀಷ್ಟಗಳನ್ನು ಪೂರೈಸುತ್ತಿರುವನು. ಆತನನ್ನು ಕಣ್ಣಾರೆ ಕಂಡ ಮಹನೀಯರು ಅನೇಕ. ಶ್ರೀ ಶ್ಯಾಮಸುಂದರ ದಾಸರಂತೂ " ನೋಡಿದೆ ವೆಂಕಟರಮಣನ ದ್ವಾರವಾಡ ಗ್ರಾಮದಿ ನಿಂತ ದೇವನ" ಎಂದು ಮನದುಂಬಿ ಸ್ತುತಿಸಿದ್ದಾರೆ. ಬೆಟ್ಟದ ಕೆಳಗೆ ಶ್ರೀ ಮುಖ್ಯಪ್ರಾಣನ ಸಾನ್ನಿಧಾನವಿದೆ. ಪ್ರತಿವರ್ಷವೂ ಚೈತ್ರ ಶುದ್ಧ ಚತುರ್ದಶಿ, ಹುಣ್ಣಿಮೆ ಹಾಗೂ ಬಹುಳ ಪ್ರತಿಪದೆಯಂದು ಮೂರು ದಿನಗಳ ಕಾಲ ಬಾಗಲವಾಡದ ಪಟವಾರಿ ಬಂಧುಗಳು ಸ್ವಾಮಿಯ ಜಾತ್ರ ಮಹೋತ್ಸವವನ್ನು ಆಯೋಜಿಸುತ್ತಾ ಬಂದಿದ್ದಾರೆ. ಇಸವಿ ೨೦೦೩ ರಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಥಾದಿಪತಿಗಳಾದ ೧೦೦೮ ಶ್ರೀ ಸುಶಮೀಂದ್ರತೀರ್ಥರುರು ಹಾಗೂ ೧೦೦೮ ಶ್ರೀ ಸುವಿದ್ಯೇಂದ್ರತೀರ್ಥರು ಆಗಮಿಸಿ ನವೀನ ಮಹಾರಥವನ್ನು ಉದ್ಘಾಟಿಸಿ, ಶ್ರೀ ಸ್ವಾಮಿಗೆ ಸಮರ್ಪಿಸಿರುತ್ತಾರೆ. ಬನ್ನಿ.. ನೀವು ಒಮ್ಮೆ ಬಂದು ಶ್ರೀಮುಖ್ಯಪ್ರಾಣಾ೦ತರ್ಗತ ಲಕ್ಷ್ಮೀ ವೆಂಕಟರಮಣನ ದರ್ಶನ ಭಾಗ್ಯ ಪಡೆಯಿರಿ.(ಕವಿತಾಳ ಹಾಗೂ ಮಾನವಿಗಳಿಂದ ಬಸ್ಸುಗಳ ಸೌಲಭ್ಯವಿದೆ.)

ಕಳೆದ ೧೮ ಸೆಪ್ಟೆಂಬರ್ ೨೦೦೮ ರಂದು ಫಲಿಮಾರು ಮಠಾಧೀಶ ಶ್ರೀ ೧೦೦೮ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಗಮಿಸಿ ಸ್ವಾಮಿಯ ದರ್ಶನ ಪಡೆದು,ಭಕ್ತಾದಿಗಳನ್ನು ಅನುಗ್ರಹಿಸಿದರು..

-ಮನೋಜ ಬಾಗಲವಾಡ.