ಬಾಡದ ಹೂವದು ಸ್ನೇಹ..........

ಬಾಡದ ಹೂವದು ಸ್ನೇಹ..........

ಬರಹ

ಬಾಡದ ಹೂವದು ಸ್ನೇಹ..........

ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಬಂದಿತೆ ಮತ್ತೆ ಮೆಲು ನಗೆಯ ಬೀರುತ್ತಾ, ಗೆಳೆಯರ ದಿನ ಆತ್ಮೀಯ ಗೆಳೆಯ ಗೆಳತಿಯರಿಗಾಗಿ,

ಸ್ನೇಹ ಅದು ಎರಡು ಮನಗಳ ನಡುವೆ ದೇದಿಪ್ಯ ಮಾನವಾಗಿ ಉರಿಯುವ ಹಣತೆ, ಬದುಕಿನ ದಾರಿಗೆ ಬೆಳಕದುವೆ, ಸ್ನೇಹದ ಹಣತೆ, ಸ್ನೇಹ ಅದು ಸೊಗಸು, ಈ ಬದುಕಿನ ಬವಣೆಗಳ ನಡುವೆ ನೆನಪಿಸಲು ಬಂದಿದೆ, ಗೆಳೆಯ / ಗೆಳತಿಯರ ಹೆಸರು, ಮರೆಯದಿರಿ ಸ್ನೇಹದ ಅಂಗಳದಲ್ಲಿ ಬಂದು ಚಿನ್ನಾಟವಾಡಿದವರ,
ಕೆಲವೇ ದಿನಗಳ ಸ್ನೇಹವಾದರೂ ತುಂಬಾ ಗಾಡ ಮತ್ತು ಆತ್ಮೀಯ ಅನ್ನಿಸುವುದು ಸ್ನೇಹ ಒಂದೇ, ಎಂದೂ ನೋಡಿರದ ವ್ಯಕ್ತಿಗಳೊಂದಿಗೆ ಸಹಜತೆಯಲ್ಲೇ ಮೂಡುವುದದು ಸ್ನೇಹ , ಆತ್ಮೀಯ ನುಡಿಗಳೊಂದಿಗೆ ಕಂಡರಿಯದ , ಬೆಸುಗೆ ನೀಡುವುದು ಸ್ನೇಹ ಒಂದೇ,

೧೯೩೫ ರಲ್ಲಿ ಇಂಗ್ಲೆಂಡ್ ನಲ್ಲಿ ಪ್ರಾರಂಭವಾಯ್ತು, ನಮ್ಮೆಲ್ಲರ ಈ ಗೆಳೆಯರ ದಿನ,ಇದು ನಮ್ಮ ಸಂಸ್ಕೃತಿಯಲ್ಲ, ಆದರೆ ಬೆಂಗಳೂರಿನಂತಹ ಮೆಟ್ರ್‍ಓ ಪಾಲಿತಿನ್ ಸಿಟಿಯಲ್ಲಿ ಎಲ್ಲವೂ ಲಭ್ಯ, ಎಲ್ಲವೂ ಉಂಟು, ಆದರೆ ಎನು ಇಲ್ಲ, ಯಾಕೆಂದರೆ ಶುಭಾಶಯ ವಿನಿಮಯಕ್ಕೂ ಸಹ ನಮಗೆ ಸ್ನೇಹಿತರು ಇಲ್ಲಿ ಅಲಭ್ಯ, ಏಕೆಂದರೆ ಇಲ್ಲಿ ಎಲ್ಲರೂ ತುಂಬಾ ಬ್ಯುಸಿ, ಆದುದರಿಂದಲೇ ಇದೆಯಲ್ಲ ಮೊಬೈಲ್, ಮೆಸೇಜ್, ಮೈಲ್, ಇತ್ಯಾದಿ, ಇಲ್ಲಿಂದ ಒಂದು ಶುಭಾಶಯ ಅಲ್ಲೋಂದು ಹೂನಗೆ, ತುಂಬಾ ದಿನಗಳ ನಂತರದ ಗೆಳಯರ ಮಿಲನವಾದರೆ ಅರಿವಿಲ್ಲದೆ, ಕಣ್ಣಂಚಲಿ ಹನಿಯದು ಜಿನುಗಿ ಜಾರಿಹೋದೀತು, ಅದಕ್ಕೂ ಇದೆ ಕೋಟಿಗಳ ಬೆಲೆ, ಅದು ಸ್ನೇಹದ ಪರಮಾವದಿ, ಇಲ್ಲಿ ಸ್ನೇಹ ಅಂತರ್ಮುಖಿ ಪದಗಳಿಗೆ ನಿಲುಕದ್ದೂ, ಸ್ನೇಹಕ್ಕೆ ಅಲ್ಲವೇ ಅಳುವಿನಲ್ಲೂ ನಗುತರಿಸುವ ಶಕ್ತಿ ಇರುವುದು. ಸ್ನೇಹದ ಹೂವದು ಬದುಕಲಿ ಎಂದೂ ಬಾಡರಿರಲಿ.

ಹೌದು ಬೇಕಿದೆ ಎಲ್ಲರಿಗೂ ಇಂತ ಒಂದು ದಿನ , ನೋವು ನಲಿವುಗಳಲ್ಲಿ ಭಾಗಿಯಾದ ಗೆಳೆಯ/ಗೆಳತಿಯರ ನೆನೆಯಲು ಒಂದು ದಿನ,
ಬ್ಯಾಂಡ್ ಕಟ್ಟುವುದು , ಕಾಣೆಕೆ ವಿನಿಮಯ ಎಲ್ಲವೂ ಇದೆ ಈ ಸ್ನೇಹದಲ್ಲಿ ಆದರೆ ಅದು, ತಪ್ಪಲ್ಲ ಹಾಗಂತ ಅಗತ್ಯವೂ ಅಲ್ಲ,
ಉತ್ತಮ ಸ್ನೇಹಕ್ಕೆ ಕಾಣೆಕೆಗಳ ಹಂಗಿಲ್ಲ,

ಸಿಹಿಸ್ನೇಹದ ಸವಿಯುಂಡು, ಸವಿಗನಸುಗಳ ಹೊತ್ತು ತಂದ ಸ್ನೇಹದ ದಿನಕ್ಕೆ ಅಭಿನಂದನೆಗಳು
ಸಂಪದದ ಎಲ್ಲಾ ಸ್ನೇಹಿತರಿಗೂ " ಗೆಳೆಯರ ದಿನದ ಶುಭಾಶಯಗಳು",

ಕಡೆಯದಾಗಿ ಒಂದು ಮಾತು, "

ಜೀವನದಲ್ಲಿ ಪ್ರೀತಿ ಹುಟ್ಟಿ ಸಾಯಬಹುದು , ಆದರೆ ಯಾವುದೇ ಕಾರಣಕ್ಕೂ ಸ್ನೇಹ ಹುಟ್ಟಿ ಸಾಯ ಬಾರದೂ "
ಸ್ನೇಹ ಅದು ಅಮರ , ಸ್ನೇಹ ಅದೂ ಚಿರ ನೂತನ.
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ;

" ಆತ್ಮೀಯ ಗೆಳತನಕ್ಕೊಂದು ಪ್ರೀತಿಯ ನಮನ"

HAPPY FRIENDSHIP DAY TO ALL SAMPADA FRIENDS