ಬಾನು ಅರಳಿದಾಗ...

ಬಾನು ಅರಳಿದಾಗ...

ಕವನ

ಬಾನಿನೊಳಗೆ ಅರಳಿ ನಿಂತ ಚಂದ್ರ ಬಿಂಬ ಕಂಡೆಯಾ

ದಾನಿಯವನು ಬುವಿಗೆ ಬೆಳಕ ಚೆಲ್ಲಿ ನಕ್ಕ ನೋಡೆಯಾ

 

ಹಸುರ ಸಿರಿಗೆ ಒಡಲ ಹರೆಯ ಚಿಲುಮೆಯಂತೆ ಕಂಡಿದೆ

ಹೆಸರ ಉಳಿಸೆ ಸುಮದ ಬಯಕೆ ಸುತ್ತಲೆಲ್ಲ ಚೆಲ್ಲಿದೆ

 

ನಗುವಿನೊಳಗೆ ಒಲುಮೆ ಸೇರಿ ಪ್ರೀತಿಯುಕ್ಕಿ ಸೆಳೆದಿದೆ

ನೊಗವ ಹೊತ್ತ ಎತ್ತಿನಂತೆ ಕೈಯ ಹಿಡಿದು ನಡೆದಿದೆ

 

ಬಾಳ ಪಯಣ ಸವಿಯ ತಾಣ ಹರುಷವೊಂದೆ ಕಾರಣ

ತಾಳವಾದ್ಯ ತೋಂತನಾನ ಗಾನವೊಂದೆ ತೋರಣ

 

ಸೃಷ್ಟಿ ಸೊಬಗು ಸುತ್ತಲೆಲ್ಲು ತುಂಬಿ ತುಳುಕಿ ನಿಂತಿದೆ

ಕಷ್ಟ ನಷ್ಟವೆರಡು ಇರದೆ ಮೋಹ ಪಾಶ ಸೆಳೆದಿದೆ

 

ನೋವು ಇರದ ಬದುಕ ನೋಟ ಸುಖವನಿಂದು ಚೆಲ್ಲಲಿ

ಬೇವು ಸಿಹಿಯ ಕೊಡಲು ಭವಕೆ ಭುವನ ಭಾಗ್ಯ ತೆರೆಯಲಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್