ಬಾಪೂ ಹೆಜ್ಜೆ ಗುರುತು
ಕವನ
ಹೃದ್ಯಮಯ ದಿಗಂತದಲ್ಲೆಲ್ಲೋ
ಹೊಂಗಿರಣ ಮೂಡಿದಂತೆ ಬಾಪೂ
ನಿನ್ನ ಜನನ ಭರತ ಭೂಮಿಗೆ.
ಮಾತೆಯ ಮಗನಾಗಿ ಮಹಾತ್ಮನಾದೆ..
ಸತ್ಯದೊಂದಿಗೆಯೇ ಪ್ರಯೋಗಗಳ ನಡೆಸಿ
ಸತ್ಯಾಗ್ರಹಿಯಾದೆ ಬಾಪೂ..
ಜೈಲುವಾಸವ ಅನುಭವಿಸಿಯೂ
ಹೋರಾಟಗಾರನಾದೆ ಬಾಪೂ
ನೀ ರಾಷ್ಟ್ರಪಿತ ನಾದೆ..
ಆಫ್ರಿಕಾದ ವರ್ಣಭೇದ ನೀತಿಯನ್ನೂ ಸೋಲಿಸಿ
ನ್ಯಾಯದ ಕಾವಲಾದೆ ಬಾಪೂ
ನೀ ಸ್ವಾತಂತ್ರ್ಯಕ್ಕೆ ಹೊಸ ಚೇತನವಾದೆ..
ಕ್ರಾಂತಿಯ ನಡುವಲ್ಲೊಂದು
ಶಾಂತಿಯ ಹಸಿರ ಚಿಗುರ ಹುಟ್ಟಿಸಿದೆ...
ನಿನ್ನ ಬಗೆಗೆ ಅರಿತವರಿಲ್ಲ ಈಗಿಲ್ಲಿ
ಹಿಸುಕಿ ಹಾಕಿರುವರು ಇತಿಹಾಸಗಳ
ನಿನ್ನ ಕೊಡುಗೆ ಮರೆತ ವಾತಾವರಣದಲಿ
ಉಸಿರಾಡಲೂ ಕಷ್ಟವಾಗುತ್ತಿದೆ ಬಾಪೂ
ಉಸಿರುಗಟ್ಟಿಸಲಾಗುತ್ತಿದೆ..
ಮತ್ತೆ ಹುಟ್ಟಿ ಬಾ ಬಾಪೂ!..
ಈ ಮಂಜು ಕವಿದ ಮನಸುಗಳಲ್ಲಿ
ನಿನ್ನ ಹೆಜ್ಜೆ ಗುರುತ ಮೂಡಿಸು ಬಾ
ಹದೆಗೆಟ್ಟ ಶಾಂತಿಯನು ನಿನ್ನ ಶೈಲಿಯಲ್ಲೇ
ಮತ್ತೆ ಬೆಳಗಿಸು ಬಾ..
-ಶಮೀರ್ ನಂದಿಬೆಟ್ಟ, ಬೆಳ್ತಂಗಡಿ.
ಚಿತ್ರ: ನವ್ಯಾ ಹೆಬ್ಬಾರ, ಹತ್ತನೇ ತರಗತಿ, ಕುಮಟಾ
ಚಿತ್ರ್
