ಬಾರದ ಸುಖಕಾಗಿ
ಕವನ
ಬಂಧನದಲ್ಲಿಹೆ ವಿಚಾರವಿಲ್ಲದೆ
ಕಂದನ ಮುಖವನು ಕಂಡು
ಸಂದಿಹ ದಿನಗಳನೆಣಿಸುತ ಸಾಗಿಹೆ
ಮುಂದಿದೆ ಬಾಳಿನ ಹಾಡು
ಕಂದಿಹ ಮನದಲಿ ಸುಖವದುಯೆಲ್ಲಿದೆ
ನಿಂದಿದೆ ತನುವದು ಸೋರಿ
ಬಂದಿಹ ಚಿಂತನೆ ಗಳಿಗೆಲಿ ನಂದಿದೆ
ತಂದಿದೆ ಸಂಕಟ ಸೇರಿ
ನೀರಿನ ತೆರದಲಿ ಭಾವನೆ ನುಗ್ಗಲು
ನಾರಿನ ರೀತಿಯೆ ಗೋಳು
ಬೇರದು ಹಿಡಿದರೆ ಮರವದು ನಿಲುವುದು
ಬಾರದೆ ಸುಖವದು ಹೇಳು
-ಹಾ ಮ ಸತೀಶ ಬೆಂಗಳೂರು
ಚಿತ್ರ್
