ಬಾರಿಸು ಜೀವನ ಶತಕ
ಕವನ
ಮನಸುಗಳು ಹುಳುಕು
ಸಂಬಂಧಗಳೆ ಕೊಳಕು
ಕಳ್ಳು ಬಳ್ಳಿ ಬರೀ ತಳುಕು
ಇರುವುದಿಲ್ಲ ನೀನು ಕೊನೆತನಕ
ಇದ್ದರು ನಿನ್ನೆ ತನಕ
ಬರುವುದಿಲ್ಲ ಕೊನೆ ತನಕ
ಬಂದರು ಬರಬಹುದು ಸುಡುಗಾಡು ತನಕ
ತಿಳಿದು ನಡೆಯಬೇಕು ನಾಳೆ ತನಕ
ತಿಳಿವಳಿಕೆ ಬೇಕು ಮನಕ
ಬೆಳಗಿಸು ಜ್ಞಾನದ ಬೆಳಕು
ಬೇಕು ಮೈಗೆ ಜಳಕ
ಮನಸು ಶುದ್ಧವಾಗಿದ್ದರೆ ಸಾಕು
ತೋರಿಸು ಕೈ ಚಳಕ
ನೋಡಿದವರಿಗೆ ಆಗಬೇಕು ಪುಳಕ
ಮಾಡಬೇಕು ಜ್ಞಾನದ ಗಳಿಕೆ
ವೈರಿಗೆ ಆಗಬೇಕು ನಾಚಿಕೆ
ಬಾರಿಸು ಜೀವನ ಶತಕ
ಸಹನೆ ಇರುವ ತನಕ
ತಾಳ್ಮೆ ತೋರಿಸು ಮನಕ
ಸಾಧನೆ ಮಾಡು ಚರಿತ್ರೆ ಸೇರುವ ತನಕ
-ಹುಚ್ಚೀರಪ್ಪ ವೀರಪ್ಪ ಈಟಿ, ಸಾ ನರೇಗಲ್ಲ, ಗದಗ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್