ಬಾರೆ ಮೋಹಕ ಗೊಂಬೆ
ಕವನ
ತುಂಟ ಪೋರಿ ನಗುವ ಬೀರಿ
ನಿಂತೆಯೇಕೆ ಒಲವ ಸಿರಿ
ನಾಲ್ಕು ಬಿಳಿಯ ಹಲ್ಲುಗಳ
ತೋರಿ ನಗುವೆ ಕಣ್ಣಿನಲೆ
ಕೆನ್ನೆ ನೋಡೆ ದಾಳಿಂಬೆ
ಬಾರೆ ಮೋಹಕ ಗೊಂಬೆ
ಗಲ್ಲಕ್ಕೊಂದು ಮುತ್ತ ಕೊಡುವೆ
ಸಿಹಿ ಸಿಹಿ ಹೋಳಿಗೆ ನೀಡುವೆ
ನೀರ ನಳದಲ್ಲಿ ಆಡದಿರು
ನೀರು ಹಾಳು ಮಾಡದಿರು
ಚಾಮಿ ನೋಡುವ ನಿನ್ನ ಲೂಟಿ
ನಿನಗಾರು ಹೇಳು ಸರಿಸಾಟಿ
ಶೀತ ಗೀತ ಆಗಿ ಕೆಮ್ಮು ಬಂದರೆ
ಡಾಕ್ಟರ್ ಮಾಮ ಸೂಜಿ ಕೊಡುವನು
ಬಣ್ಣ ಬಣ್ಣದ ಅಂಗಿ ಬಳೆ ಹಾಕಿರುವೆ
ಕಾಡಿಗೆಯ ಕಪ್ಪು ತಿಲಕ ಹಣೆಯಲಿದೆ
ತಾರಸಿಯಲಿ ನಿಂತ ಚೆಲುವ ಭಂಗಿಯೆ
ನಮ್ಮ ಮನೆಯ ಮುದ್ದಿನ ಕುವರಿಯೆ
ಕಪಿಲೆ ದನದ ಹಾಲು ಕೊಡುವೆನು
ಲಾಲಿ ಹಾಡು ಹೇಳಿ ಮಲಗಿಸುವೆನು
-ರತ್ನಾ ಕೆ ಭಟ್ ತಲಂಜೇರಿ
ಚಿತ್ರದಲ್ಲಿ ಪುಟ್ಟ ಮಗು ಮಹತಿ (ತಂದೆ: ಶಿವಪ್ರಸಾದ್, ತಾಯಿ ಕೀರ್ತನಾ)
ಚಿತ್ರ್
