ಬಾರೊ ಹೃದಯ ಮಂದಿರಕ್ಕೆ ನೆಲೆಸೊ ಮನ್ನಿಸಿ ಬೇಡಿಕೆ
ಕವನ
ಬಾ ಕೃಷ್ಣ ಬಾ ಬಾ ಕೃಷ್ಣ
ಬಾರೊ ಹೃದಯ ಮಂದಿರಕ್ಕೆ
ನೆಲೆಸೊ ಮನ್ನಿಸಿ ಬೇಡಿಕೆ.........ಕೃಷ್ಣ
ದೇವಕಿ ಬಸಿರಿಂದ ಬಂದವನೆ
ಯಶೋದೆಯ ಉಸಿರಾದವನೆ
ವಸುದೇವ ನಂದನನೆ
ನಂದ ಆನಂದ ಕಂದನೆ
ದುಷ್ಟ ದೈತ್ಯರ ಕೊಂದ ಮುಕುಂದನೆ
ಶಿಷ್ಟ ಭಕ್ತರ ಕಾಯ್ದ ಗೋವಿಂದನೆ......ಕೃಷ್ಣ
ಮೂರ್ಜಗ ತೋರಿದ ಬಾಲನೆ
ಗೋವ್ಗಳ ಕಾಯ್ದ ಗೋಪಾಲನೆ
ಬೆಣ್ಣೆ ಮೆದ್ದ ಗೋಪಿಲೋಲನೆ
ಮನಸ ಗೆದ್ದ ರಾಧಲೋಲನೆ
ಗಿರಿಯನೆತ್ತಿದ ವೇಣುಲೋಲನೆ
ಹೆಡೆಯ ಮೆಟ್ಟಿದ ಲೋಕಪಾಲನೆ.....ಕೃಷ್ಣ
ಭಾಮ ರುಕ್ಮಿಣಿ ಪ್ರಿಯಸಖನೆ
ದ್ರೌಪದಿ ಮಾನ ರಕ್ಷಕನೆ
ಮಹಾಭಾರತದ ನಾಯಕನೆ
ಜಗತ್ತಿನ ಉದ್ಧಾರಕನೆ
ವಿಶ್ವರೂಪ ದರ್ಶಕನೆ
ಗೀತಾಮೃತಸಾರ ಭೋದಕನೆ.......ಕೃಷ್ಣ
ಶಾರಿಸುತೆ
(ದ.ರಾ.ಬೇಂದ್ರೆ ಯವರ ಬಾರೊ ಸಾಧನ ಕೇರಿಗೆ ಹಾಡಿನ ದಾಟಿ)
ಈ ಹಾಡನ್ನು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಕೇಳಬಹುದು
http://youtu.be/lQoHRFnrFGU
ಚಿತ್ರ ಕೃಪೆ:ಅಂತರ್ಜಾಲ
ಚಿತ್ರ್