ಬಾರೋ ಕೃಷ್ಣಯ್ಯಾ...
ಕವನ
ಒಲಿದು ಬಾ ಕೃಷ್ಣಯ್ಯಾ
ಎನ್ನ ಕಷ್ಟಕ್ಕಯ್ಯಾ
ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ
ಮನದೊಳಗೆ ಹಸಿವಿಲ್ಲ
ನಿನ್ನ ಬಜಿಪಲು ಇಲ್ಲ
ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ
ಸೇವೆಗೈಯಲು ಬಂದೆ
ಮಧ್ಯವರ್ತಿಗಳೆಲ್ಲ
ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ
ಅಲೆಯುತಿಹೆ ಗುಡ್ಡದಲಿ
ಕಲ್ಲು ಮುಳ್ಳುಗಳೆಡೆಯೆ
ತನುವದುವು ಸೋಲಲು ಬಾರೋ ಎನ್ನಯ್ಯಾ
ಲಾಲಿಸೈ ಪಾಲಿಸೈ
ಮುದ್ದು ಮುರಳೀ ಲೋಲ
ಉಡುಪಿಯೊಳು ಸೇರಿದೆ ಬಾರೋ ಎನ್ನಯ್ಯಾ
ದೀನನಾಗಿಹೆನಿಂದು
ಕಾಪಾಡು ಜಗಬಂಧು
ನೀಲಮೇಘ ಶ್ಯಾಮ ಬಾರೋ ಎನ್ನಯ್ಯಾ
-ಹಾ ಮ ಸತೀಶ ಬೆಂಗಳೂರು
ಚಿತ್ರ : ಆದ್ಯಂತ್ ಅಡೂರು
ಚಿತ್ರ್