ಬಾರೋ ಗಣಪ

ಬಾರೋ ಗಣಪ

ಕವನ

ಬಾರೋ ಗಣಪ ನಮ್ಮ ಮನೆಗೆ

ತಾರೋ ಹರುಷ ಮುದ್ದು ಕಂದನೆ

ಪೀಠದ ಮೇಲೆ ಕೂರಿಸಿ ಚಂದದಿ

ಪಾಠವನೋದಲು ತೆರಳುವೆ  ತೋಷದಿ    

 

ಗರಿಕೆಯ ಹಾರವ ಕೊರಳಿಗೆ ಹಾಕುವೆ 

ಕರಿಮುಖ ದೇವಗೆ ಕೈಗಳ ಮುಗಿವೆ

ತರತರ ನೈವೇದ್ಯ ಅರ್ಪಿಸಿ ನಮಿಸುವೆ

ಕರದಲಿ ಶೋಭಿಪ ಉಂಗುರ ತೊಡಿಸುವೆ

 

ಡೊಳ್ಳಿನ ಉದರಕೆ ಸರ್ಪವ ಸುತ್ತಿಹೆ

ಸುಳ್ಳು ವಂಚನೆ ಇಲ್ಲದೆ ನಗುತಿಹೆ

ಗಂಧ ಕುಂಕುಮ ಅಕ್ಷತೆಕಾಳು 

ನೀಡುತ ಭಜಿಸುವೆ ಕಾಯಿ ಹೋಳು

 

ದೀಪ ಧೂಪ ಆರತಿ ಬೆಳಗುವೆ

ಪಾದ ಮೂಲಕೆ ಶಿರವ ಬಾಗುವೆ

ಕೃಪೆಯ ತೋರುತ ಹರಸು ವಿನಾಯಕ

ಚೌತಿಯ ದಿನದಿ ದೇವ ಪರಿಪಾಲಕ

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್