ಬಾಲ್ಯದ ಗೆಳತಿಗೊಂದು ಪತ್ರ (ಕವನ)

ಬಾಲ್ಯದ ಗೆಳತಿಗೊಂದು ಪತ್ರ (ಕವನ)

ಕವನ

<ಸಂಪದ ಬಳಗದ ಗೆಳೆಯ ಗೆಳತಿಯರಿಗೆ ಕವನ ಬರೆಯುವ ಕಲೆ ನನಗೆ ಒಲಿದಿಲ್ಲ ಆದರು ಸ್ನೇಹಿತರಾದ ಜಯಂತ್ , ಗೋಪಿನಾಥರು , ನಾವಡರು , ಸುರೇಶ್ ಹೆಗ್ಡೆಯವರು ವಾಣಿಯವರು ಮತ್ತು ಎಲ್ಲರು ಕವನ ಬರೆಯುವುದು ಕಂಡು ನಾನು ಒಂದು ಬರೆಯಲೇ ಬೇಕು ಅಂತ ತೀರ್ಮಾನ ಮಾಡಿ ಬರೆದಿದ್ದೇನೆ ನಗದೆ ಹೇಗಿದೆ ಅಂತ ತಿಳಿಸಿ>


 


.................


ನನ್ನ ಬಾಲ್ಯದ ಗೆಳತಿ ಹೆಸರು ಸಿರಿಗೌರಿ


ನೆನಪು ಸದಾ ಹಸಿರು


ಕಣ್ಣು ಮುಚ್ಚಿ ನೆನೆಯಲು ಎದೆಯ ಸ್ಪರ್ಶಿಸುವುದು


ಈಗಲು ಅವಳ ಉಸಿರು


ಅರಳು ಕಂಗಳಲ್ಲೇನೊ ಮುಂಗಾರಿನ ಮಿಂಚಿನ ಸೆಳವು


ಕೆನ್ನೆ ಗಲ್ಲಗಳಲ್ಲಿ ಸದಾ ಅರುಣರಾಗದ ಸಂಜೆಯ ಹೊಳವು


ನಕ್ಕರದು ಮುಂಜಾವಿನ ಪಾರಿಜಾತದ ಹೂವಿನ ಮಳೆಯು


ಮುನಿದರೆ ಸಹ್ಯಾದ್ರಿಯ ನಾಡಿನ ಜಿನುಗು ಮಳೆಯ ಪರಿಯು


ನವರಾತ್ರಿಯ ಅಂಗಳದ ಸ್ಪಟಿಕದ ಗೊಂಬೆ ಅವಳು


ಅವಳ ದಿನವು ಕಾಣದಿರೆ ನನ್ನ ಮನವು ಒಲೆಯ ಮೇಲಿನ ಅರಳು


ಅಂತ ಸಿರಿಗೌರಿಗೆ ಬರೆದ ನನ್ನ ಮನದ ಪತ್ರ


ಪತ್ರದಿ ಮೂಡಿಸಿದೆ ಅವಳ ಕಂಗಳ ವರ್ಣ ಕದಪುಗಳ ಸಂಜೆಯ ಬಣ್ಣ


ಯಾರು ಇಲ್ಲದ ಸಮಯ ಕಾದೆ ಕಳ್ಳಬೆಕ್ಕಿನ ರೀತಿ


ನಡು ಅಂಗಳದಿ ಅವಳು ಒಬ್ಬಳೆ , ಮೊಗದಲಿ ನಗುವಿನ ಮೋಡಿ


ನಿದಾನವಾಗಿ ನಡೆದೆ , ಮೊಣಕಾಲೂರಿ ಅವಳ ಮುಂದೆ ಕುಳಿತೆ


ಅವಳಿಗಾಗಿ ಬರೆದ ವರ್ಣ ವರ್ಣದ ಪತ್ರವ ಅವಳ ಮುಂದೆ ಹಿಡಿದೆ


ನನ್ನತ್ತ ನೋಡಿದಳು ಬಟ್ಟಲು ಕಂಗಳ ಅರಳಿಸಿ ನಕ್ಕಳು


ಕೈ ಚಾಚಿ ನಾನು ಬರೆದ ಪತ್ರವ ಹಿಡಿದಳು


ಎರಡು ಕೈಗಳಿಂದಲು ಪತ್ರವನ್ನು ಅದುಮಿ ಮುದುರಿದಳು......


ನಿದಾನವಾಗಿ ತನ್ನ ಪುಟ್ಟ ಬಾಯನ್ನು ತೆರೆದು...


ನಾ ಬರೆದ ಪತ್ರವನ್ನು ತನ್ನ ಬಾಯ ಒಳಗಿರಿಸಿ ತಿನ್ನಲು ಹಚ್ಚಿದಳು


ಛಿ! ತುಂಟಿ ನನ್ನ ಅಕ್ಕನ ಮಗಳು ಸಿರಿಗೌರಿ ಹಸುಗೂಸು ಇನ್ನು


ಕುಡಿದ ಹಾಲಿನ ಛಾಯೆ ತುಟಿಯಿಂದ ಮರೆಯಾಗಿಲ್ಲವಿನ್ನು


ಶಬ್ದವೇನೆಂದು ತಿರುಗಿ ನೋಡಲು ಬೆನ್ನ ಮೇಲೊಂದು ಗುದ್ದು


 ’ಬೇಡವೆಂದರೂ ಮಗುವ ಕಾಡಿಸುವೆ” ಎಂದು ಅಕ್ಕನ ಕೂಗು


ನನ್ನ ಮರೆವಿಗೆ ಶಪಿಸಿ ನಿಂತೆ ನಾ ನಾಗ


ಬಿಟ್ಟ ಬಾಣಾದ ತೆರದಿ ಓಡಿದೆ ಬಾಗಿಲಿನತ್ತ ಬೇಗ

 


Comments