ಬಾಲ್ಯದ ನೆನೆಪು

ಬಾಲ್ಯದ ನೆನೆಪು

ಮೈಸೂರು ಎಂದರೆ ಎಲ್ಲರಿಗು ಇಷ್ಟ ಆ ಪರಿಸರ.  ಐತಿಹಾಸಿಕ ಪರಂಪರೆಯ ಊರು ನನ್ನ ಮೈಸೂರು . ಟಿ. ನರಸೀಪುರದಲ್ಲಿ ಗುಬ್ಬಚ್ಚಿ ಯಾಗಿದ್ದ ನಾನು ಪ್ರಪ್ರಥಮ ಬಾರಿಗಿ ಮೈಸೂರುಗೆ ಬಂದಿದ್ದು ನನ್ನ ಅವ್ವನ ಜೊತೆ. ಉದಯರಂಗ ಬಸ್ಸುಯೇರಿದ ನಾನು  ಮತ್ತೆ ಅವ್ವ . ಮೈಸೂರಿನ ಚತ್ರಿಮರದಲ್ಲಿ ಇಳಿದ ನಾವು , ಅರಸು ರಸ್ತೆಗೆ ಬಂದ್ಮೇಲೆ ದೂರದಲ್ಲಿ ಇರುವ ಆ ಹಸಿರು ಗೋಪುರುವನ್ನು ತೋರಿಸಿ ಅವ್ವ ಹೇಳಿದ್ದು ಅದು ಡಿ .ಸಿ ಆಫೀಸ್, ನಾ ಕೆಲಸ ಮಾಡುವ ಜಾಗ  , ನೀ  ಎಲ್ಲಿ ಕಳೆದು ಹೋದರೆ ಈ ಹೆಸರು ಹೇಳ್ಬೇಕು ಅಂತ . ತದನಂತರ ಮೈಸೂರುಗೇ ಸಂಪೂರ್ಣ ಸೇರಿಕೊಂಡ ನಾವು, ಈ ಡಿ .ಸಿ ಆಫೀಸ್ ನ ನೆನಪು ನಾನಾರು. ಸದ್ವಿದ್ಯಾ ಶಾಲೆಯಿಂದ ಸೈಕಲ್ ಬರುವಾಗ , ಹಾಗೆ ಅವ್ವನ ಆಫೀಸ್ಗೆ ಹೋಗಿ ಕಂಪ್ಯೂಟೂರಿನಲ್ಲಿ ಆಟಾಡೋದು ,ಮರದ ಮೆಟ್ಟಿಲನ್ನು ಆತ್ತು  ಇಳಿಯೋದು, ೫ ರೂಪಾಯ ಎಳೆನೀರು , ೫೦ ಪೈಸೆ , ೧ ರೂಪಾಯಿನ ಪಚ್ಚಬಾಳೆ . ಶುಕ್ರವಾರ ಹಾಗು ಹಬ್ಬದಿನದ ಸಿಹಿ ಖಾರ ಎಲ್ಲ ತಿಂದ ನೆನೆಪೇ ಅಮರ. ಕಾಲೇಜು ಸೇರಿದ ಮೇಲೆ ಎಷ್ಟೋಸಾರಿ ಅವ್ವನ್ನು ನಾನೇ ಆಫೀಸುಗೆ ಬೈಕಲ್ಲಿ ಬಿಡೋದು . ಹೀಗೇ  ಸಾಮಾಜಿಕ ಜಾಲಾತಾಣದಲ್ಲಿ ಈ ಚಿತ್ರ ನೋಡಿದ್ರೆ ಎಲ್ಲ ನೆನಪು ಕಣ್ಣ ಮುಂದೆ ಬಂದು ಹೋಗ ಹಾಗಿದೆ ೨೦-೩೦ ವರ್ಷದ ಕಥೆ . ಮೈಸೂರು ಎಂದರೆ ಭಾವುಕದ ರೋಮಾಂಚನ !