ಬಾಲ್ಯ ನೆನಪಾಗುತ್ತೆ

ಬಾಲ್ಯ ನೆನಪಾಗುತ್ತೆ

ಕವನ

ಯಾರಾದರೂ ಮೋಸ ಮಾಡಿದಾಗ

ಗೆಳೆಯನೊಬ್ಬ ಬೆನ್ನಿಗೆ ಇರಿದಾಗ

ಪ್ರೇಯಸಿಯ ಮೊಹಬ್ಬತ್ತು ಮುಖ ತಿರುವಿಕೊಂಡಾಗ

ಬಾಲ್ಯ ನೆನಪಾಗುತ್ತೆ

 

ಈಗೀಗ ಅಪ್ಪ ಮುನಿಸಿಕೊಂಡಾಗ, 

ಅಮ್ಮ ಊಟಕ್ಕೆ ಕರೆಯದಿದ್ದಾಗ

ಅವಳ ಕೈಅಡುಗೆ ಚೆಂದಿದ್ದರೂ ಹೇಳಲೂ ಹಿಂಜರಿದಾಗ

ಬಾಲ್ಯ ನೆನಪಾಗುತ್ತೆ

 

ಒಂದೊತ್ತಿನ ತುತ್ತಿಗಾಗಿ ಕನಸುಗಳ ಮಾರಿಕೊಂಡಾಗ

ಅವರ ಕನಸು ನನಸು ಮಾಡುತ್ತಾ ಜೀವನವೇ ಕಳೆದುಕೊಂಡಾಗ

ಬಾಲ್ಯ ನೆನಪಾಗುತ್ತೆ

 

ನೆಲದ ಘಮ ಮಳೆಗೆ ತಾಕಿದಾಗ

ಮಳೆಯ ಝರಿಯಲಿ ಕಾಗದ ದೋಣಿ ದಡ ಹುಡುಕುವಾಗ

ನೆಂದ ದೋಣಿ ಮುಗ್ಗರಿಸಿ ಬಿದ್ದು ಮುಳುಗಿದಾಗ

ಬಾಲ್ಯ ನೆನಪಾಗುತ್ತೆ

 

ಈಗ ಒಮ್ಮೆಯಾದರೂ ಮರಳಬೇಕು ಬಾಲ್ಯಕ್ಕೆ 

ಉಳಿದ ನನ್ನೆಲ್ಲಾ ಜೀವನ ಅಡವಿಟ್ಟು.

ಈಗೀಗ ಯಾಕೋ ಬಾಲ್ಯ ನೆನಪಾಗುತ್ತೆ.

 

-ಸಿಕಂದರ್ ಅಲಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್