ಬಾಳಿಗೊಂದು ಚಿಂತನೆ - 101

ಬಾಳಿಗೊಂದು ಚಿಂತನೆ - 101

ಒಳ್ಳೆಯವರಲ್ಲಿ ಒಂದು ಒಳ್ಳೆಯ ಗುಣ ಎಂದರೆ ಅತ್ಯಂತ ಕೆಟ್ಟ ಸಮಯದಲ್ಲೂ ಕೂಡ ಅವರು ಒಳ್ಳೆಯವರಾಗಿಯೇ ಇರೋದು. 

ದುಡ್ಡು ಕೇವಲ ನಿಮ್ಮಹೊರನೋಟದ ಇರುವಿಕೆಯನ್ನು ಬದಲಿಸಬಹುದು ಆದರೆ ನಿಮ್ಮ ಬುದ್ದಿಶಕ್ತಿ ಹಾಗೂ ಹಣೆಬರಹ ಬದಲಿಸಲು ಸಾಧ್ಯವಿಲ್ಲ.

ಸಮಯ,ವ್ಯಕ್ತಿ ಹಾಗೂ ಸಂಬಂಧಗಳನ್ನು ನಾವು ಕಳೆದುಕೊಂಡಾಗಲೇ ಅವುಗಳ ಬೆಲೆ ಗೊತ್ತಾಗುತ್ತೆ.  "ಸತ್ಯ" ದ ಕಡೆಗೆ ಯಾರೂ ನಿಲ್ಲದಿದ್ದರೆ ಕೆಲವೊಮ್ಮೆ ಸುಳ್ಳು ಗೆಲ್ಲುತ್ತೆ. ಆದರೂ ಕೊನೆಗೆ ಸತ್ಯವೇ ಗೆಲ್ಲೋದು.

ಸಮಯ ಯಾರನ್ನೂ ಸೋಲಿಸೋದಿಲ್ಲ ಮತ್ತು ಗೆಲ್ಲಿಸೋದಿಲ್ಲ ಆದರೆ ಪಾಠ ಮಾತ್ರ ಪಕ್ಕಾ ಕಲಿಸುತ್ತೆ. ಸತ್ತ ಮೇಲೆ ಹೊಗಳುವುದು ಹಾಗೂ ಹೃದಯ ಒಡೆದ ಮೇಲೆ ಕ್ಷಮೆ ಕೇಳುವುದು ಎರಡಕ್ಕೂ ಮಹತ್ವವಿಲ್ಲ.

"ಸಂಶಯ" ಯಾವಾಗ ಯಾವ ಬಾಗಿಲಿನಿಂದ ಪ್ರವೇಶ ಮಾಡುತ್ತದೆಯೋ ಅದೇ ಕ್ಷಣ ಅದೇ ಬಾಗಿಲಿನಿಂದ "ವಿಸ್ವಾಸ" ಹೊರಟು ಹೋಗಿರುತ್ತೆ.

ನೀವು ಹೇಗೆ ಬೆಳೆಯಬೇಕು ಅಂದರೆ ಜನ ನಿಮ್ಮ ಬರುವಿಕೆಗಾಗಿ ಕಾಯಬೇಕು ವಿನಃ ಹೋಗುವಿಕೆಗಾಗಿ ಅಲ್ಲ. ಜೀವನದಲ್ಲಿ ಎಲ್ಲರೂ ದುಃಖ ಪಡ್ತಾರೆ ಆದರೆ ನಿಮಗಾಗಿ ದುಃಖ ಪಡುವವರನ್ನು ಎಂದೂ ನಿಮ್ಮಿಂದ ದೂರ ಮಾಡಿಕೊಳ್ಳಬೇಡಿ.

ನಿಮ್ಮ ಟೈಮ್ ಮತ್ತು ಪರಿಸ್ಥಿತಿ ಸರಿ ಇರದೇ ಇದ್ದಾಗ ಬಹಳ ಸಹನೆ ತಗೆದುಕೊಳ್ಳಬೇಕಾಗುತ್ತೆ ಮತ್ತು ಬೇರೆಯವರ ಟೀಕೆಗಳನ್ನು ಎದುರಿಸಬೇಕಾಗುತ್ತೆ.

ಅಸತ್ಯವನ್ನು ಯಾರು ತನ್ನದಾಗಿಸಿಕೊಳ್ಳುತ್ತಾರೋ ಅವರು ಕ್ರಮೇಣ ನಾಶ ಹೊಂದುತ್ತಾ ಹೋಗುತ್ತಾರೆ. ಯಾವುದು ನಿಮ್ಮದಲ್ಲವೋ ಅದು ನಿಮಗೆ ಸಿಗಲ್ಲ, ಅದಕ್ಕಾಗಿ ದುಃಖಪಡುವದನ್ನು ಬಿಟ್ಟು ಬಿಡಿ. 

ಗೆಲ್ಲುವ ಉತ್ಸಾಹಕ್ಕಿಂತ ಸೋಲುವ ಭಯ ಹೆಚ್ಚಾದ್ರೆ ಖಂಡಿತ ಸೋಲುತ್ತೀರಿ. ಎಂದಿಗೂ ಉತ್ಸಾಹ ಕಳೆದುಕೊಳ್ಳಬೇಡಿ. ಎಲ್ಲರೂ ಮಾತಾಡ್ತಾರೆ ಆದ್ರೆ ಯಾವಾಗ, ಎಲ್ಲಿ, ಹೇಗೆ ಮಾತಾಡಬೇಕು ಅನ್ನೋದು ಕಡಿಮೆ ಜನ ಕಲಿತಿರ್ತಾರೆ. ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ಖಂಡಿತ ಸಮಾಧಾನ ತಾನೇ ಎದುರಿಗೆ ಬರುತ್ತೆ.

(ಸಂಗ್ರಹ) -ಬಸಯ್ಯ ಜಿ.ಮಳಿಮಠ, ಹುಬ್ಳಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ