ಬಾಳಿಗೊಂದು ಚಿಂತನೆ - 105
*ಮನಸ್ಯೇಕಂ ವಚಸ್ಯೇಕಂ* *ಕರ್ಮಣ್ಯೇಕಂ ಮಹಾತ್ಮನಾಂ/*
*ಮನಸ್ಯೇಕಂ ವಚಸ್ಯೇಕಂ* *ಕರ್ಮಣ್ಯೇಕಂ ದುರಾತ್ಮನಾಂ//*
ಮಹಾತ್ಮರ, ಒಳ್ಳೆಯ ಸಂಪನ್ನ ವ್ಯಕ್ತಿಗಳ ಮನಸ್ಸಿನಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಒಂದೇ ಹಾಗೆ ಇರುತ್ತಾರೆ. ಒಳಗೊಂದು ಹೊರಗೊಂದು ಮಾತನಾಡಿ ಅವರಿಗೆ ಯಾರನ್ನೂ ಮೆಚ್ಚಿಸಿಕೊಳ್ಳಲು ಬರುವುದಿಲ್ಲ. ಕೆಟ್ಟ ಮನಸ್ಸನ್ನು ಹೊಂದಿದವರ ಮಾತು, ಮನಸ್ಸು, ಕೃತಿ ಎಲ್ಲದರಲ್ಲೂ ಕೃತ್ತಿಮತೆ ಕಾಣುತ್ತದೆ. ಅವರಿಗೆ ಆಡಿದಂತೆ, ನುಡಿದಂತೆ ನಡೆಯಲು ಬಾರದು. ಗೋಸುಂಬೆಯಂತೆ ಬಣ್ಣ ಬದಲಾಯಿಸುವುದರಲ್ಲಿ ನಿಸ್ಸೀಮರು. ಹೇಳುವುದೇ ಒಂದು, ಕಾರ್ಯದಲ್ಲಿ ಮತ್ತೊಂದು. ಇಂಥವರ ಮಾತು ನಂಬಿಯೇ ಜನ ಹಾಳಾಗುವುದು. ಬಹಳ ವಿನಯ, ವಿಧೇಯತೆಯ ನಾಟಕ, ಮುಖಭಾವ ಮಾಡಿದಾಗ ಸುಲಭವಾಗಿ ಮೋಸಹೋಗಿ ಬಿಡ್ತೇವೆ. ಸಾಧು ಸ್ವಭಾವ ಒಪ್ಪೋಣ. ಆ ಸ್ವಭಾವದೊಳಗೆ ಒಂದು ದೊಡ್ಡ ನಂಜಿನ ಕೂಪವೇ ಅಡಗಿರುತ್ತದೆ ಎಂದು ತಿಳಿವಾಗ ನಾವು ಮೋಸ ಹೋಗಿ ಆಗಿರುತ್ತದೆ. ಎಲ್ಲರೂ ಅಲ್ಲ, ಕೆಲವು ಮಂದಿ ಅಪ್ಪಟ ಬಂಗಾರದಂತಹ ಮನಸ್ಸಿನವರೂ ಇದ್ದಾರೆ. ಮುಖವಾಡದ ಹಿಂದಿನ ಸತ್ಯವ ಪರೀಕ್ಷಿಸಿ ನಂಬೋಣ, ವ್ಯವಹರಿಸೋಣ. ಹಾಗಾಗಿ ಜಾಗ್ರತೆ ಬೇಕು.
‘ಅತಿ ವಿನಯ ಧೂರ್ತ ಲಕ್ಷಣಂ’
ಅಲ್ಲವೇ? ನಮ್ಮಿಂದ ಏನಾದರೂ ಕೆಲಸವಾಗಬೇಕೆಂದಿದ್ದರೆ ಈ ಮಾತೇ ಎದುರಿನವನ ಅಸ್ತ್ರ.
-ರತ್ನಾ ಭಟ್ ತಲಂಜೇರಿ
(ಶ್ಲೋಕ : ಸರಳ ಸುಭಾಷಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ