ಬಾಳಿಗೊಂದು ಚಿಂತನೆ - 121

ಬಾಳಿಗೊಂದು ಚಿಂತನೆ - 121

ರೋಗಶೋಕಪರೀತಾಪಬಂಧನವ್ಯಸನಾನಿ ಚ/

ಆತ್ಮಪರಾಧವೃಕ್ಷಸ್ಯ ಫಲಾನ್ಯೇತಾನಿ ದೇಹಿನಾಮ್//

ನಾವು ಏನು ಮಾಡಿದ್ದೇವೋ ಅದರ ಪ್ರತಿಫಲವನ್ನೇ ಪಡೆಯುತ್ತೇವೆ. ಎಸಗಿದ ಕರ್ಮ ಫಲಗಳು ಬೆನ್ನ ಹಿಂದೆಯೇ ಬರುವುದು. ರೋಗ, ಶೋಕ, ಸಂಕಟ, ನಿರ್ಬಂಧ ಹಾಗೂ ಕೆಟ್ಟ ಚಟಗಳು ಬರಬೇಡ ಅಂದರೂ ಒಮ್ಮೆ ಅಂಟಿಕೊಂಡರೆ ಬಿಟ್ಟು ಹೋಗದು. ನಮ್ಮದೇ ಅಪರಾಧ ವೃಕ್ಷಗಳ ಫಲಗಳಾಗಿವೆ.

ನಾವು ಬದುಕಿರುವಾಗ ಉತ್ತಮ ಕೆಲಸವನ್ನೇ ಮಾಡಿದರೆ ನಮಗೆ ಸತ್ಕೀರ್ತಿ ಸಿಗುತ್ತದೆ. ಪರರಿಗೆ ಉಪಕಾರಿಯಾಗಿ ಬಾಳುವುದು ಮಾನವ ಧರ್ಮ. ಅದರಿಂದ ನಿಮಗೆ ಹೊಗಳಿಕೆಯೇ ಸಿಗಲಿ ಅಥವಾ ತೆಗಳಿಕೆಯೇ ಸಿಗಲಿ ನಿಮ್ಮ ಗುರಿ ಸರಿಯಾಗಿರಲಿ. 

ಸಂಗ್ರಹ: ರತ್ನಾ ಭಟ್ ತಲಂಜೇರಿ 

ಶ್ಲೋಕ: ಸುಭಾಷಿತ ರತ್ನಾವಳಿ