ಬಾಳಿಗೊಂದು ಚಿಂತನೆ - 125
ಒಂದು ಸುಭಾಷಿತದಲ್ಲಿ ಓದಿದ ನೆನಪು. ಈ ಲೋಕದಲ್ಲಿ ಎರಡು ರೀತಿಯ ಮಹಾಪುರುಷರು ಇನ್ನೂ ಹುಟ್ಟಿಲ್ಲವೆಂದು.
*ದ್ವಾವಿಮೌ ಪುರುಷೌ ಲೋಕೇ ನ ಭೂತೌ ನ ಭವಿಷತ:/*
*ಪ್ರಾರ್ಥಿತಂ ಕುರುತೇ ಯಶ್ಚ ಯಶ್ಚ ನಾರ್ಥಯತೇ ಪರಂ//*
ಓರ್ವ ಮಹಾಪುರುಷ ಬೇಡಿದ್ದನ್ನು ಮತ್ತೋರ್ವರಿಗೆ ಕೊಡುವವರು. ಇನ್ನೋರ್ವರು ಬೇರೆಯವರಿಂದ ಏನನ್ನೂ ಸ್ವೀಕರಿಸದವರು. ಹಾಗೆಯೇ ‘ಇಬ್ಬರು ಮಹಾಪುರುಷರು’ ಸಹ ಇರುವರು.
ಓರ್ವರು ಯೋಗಿಗಳು, ಎಲ್ಲವನ್ನೂ ಬಿಟ್ಟವರು, ಪ್ರಪಂಚದ ಉಳಿವಿಗಾಗಿ, ಮಾನವೀಯತೆಯನ್ನು ಬಿತ್ತಿ ಜನರ ಮನಸ್ಸನ್ನು ಪರಿವರ್ತನೆ ಮಾಡಲು ನಿರಂತರ ದುಡಿವವರು. ನೈತಿಕ ಮೌಲ್ಯಗಳ ಆಗರವೇ ಅವರ ಮಾತು, ಗುಣನಡತೆಗಳಲ್ಲಿ ಕಾಣುವುದು. ಇನ್ನೋರ್ವ ಮಹಾಪುರುಷರು ಯುದ್ಧದಲ್ಲಿ ಹೆದರಿ, ಜೀವಭಯದಿಂದ ಶತ್ರುವಿಗೆ ಬೆನ್ನು ತೋರಿಸಿ ಓಡದವರು. ತನ್ನ ನೆಲಕ್ಕಾಗಿ, ಜನರಿಗಾಗಿ, ಉಂಡ ಉಪ್ಪಿನ ಋಣಕ್ಕಾಗಿ ಮನಸ್ಸು ಮಾಡುವವರು. ನಾವು ವಾಸಿಸುವ ನೆಲ, ಕುಡಿಯುವ ನೀರು ನಮ್ಮ ನಾಡು, ನಮ್ಮ ಜನ ನಮಗೆ ಶ್ರೇಷ್ಠವಲ್ಲವೇ?
ಸಂಗ್ರಹ:ರತ್ನಾ ಭಟ್ ತಲಂಜೇರಿ
(ಶ್ಲೋಕ: ಮಹಾಭಾರತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ