ಬಾಳಿಗೊಂದು ಚಿಂತನೆ - 126

ಬಾಳಿಗೊಂದು ಚಿಂತನೆ - 126

ತಾನು, ತನ್ನದು ಎಂಬುದು ಸರ್ವೇ ಸಾಮಾನ್ಯ. ಅನ್ಯ ಅಥವಾ ಬೇರೆ ಆಶ್ರಯಿಸಬಾರದೆಂದು ಅಲ್ಲ .ಅಷ್ಟೂ ಅನಿವಾರ್ಯತೆಗೆ ನಾವು ಇಳಿಯಬಾರದಷ್ಟೆ. ಆಸೆ -ಆಕಾಂಕ್ಷೆಗಳನ್ನು ಸ್ಥಿಮಿತದಲ್ಲಿಟ್ಟರೆ ಅನಿವಾರ್ಯತೆ ಹತ್ತಿರ ಬರಲೂ ಹೆದರಬಹುದು. ಆಸೆಯ ಕಡಲನ್ನು ದಾಟುವ ಸಾಹಸ ಮಾಡಿದರೆ ಮುಳುಗಿಯೇ ಹೋಗಬಹುದು. ದೋಣಿ ಇರುವುದು ನೀರಿನ ಮೇಲೆ ತೇಲಲು. ಅದೇ ದೋಣಿಗೆ ನೀರು ನನ್ನೊಳಗೆ ಬರಲಿ ಎಂದು ಆಸೆಯಾದರೆ ಪರಿಸ್ಥಿತಿ ಏನಾಗಬಹುದು? ಮುಳುಗಬಹುದು. ಹಾಗಾಗಿ ನಮ್ಮ ಇತಿಮಿತಿ ಅರಿತರೆ ಚೆನ್ನ. ಪ್ರತಿಯೊಬ್ಬರಿಗೂ ಸ್ವಧರ್ಮ, ತನ್ನತನ ಎನ್ನುವುದು ಶ್ರೇಷ್ಠ.ಅದನ್ನು ಮೀರುವುದು ತರವಲ್ಲ.

*ಸ್ವಧರ್ಮಾಚರಣಂ ಶ್ರೇಯ: *ಪರಧರ್ಮೋ ಭಯಾವಹ:/*

*ದುರ್ಬಲೋ೦ಬುನಿ ಮಾತಂಗ: ಕ್ಷಿತೌ ನಕ್ರೋ ನ ಶಕ್ತಿಮಾನ್//*

ತನ್ನ ಧರ್ಮವನ್ನೇ ತಾನು ಆಚರಿಸುವುದೊಳಿತು. ಬೇರೆಯವರ ಧರ್ಮ ಭಯಾನಕ, ಅದನ್ನು ಗೌರವಿಸೋಣ. ಆನೆ ಬಲಶಾಲಿ ಪ್ರಾಣಿಯಾದರೂ ನೀರಿಗೆ ಬಿದ್ದು ಸುಳಿಗೆ ಸಿಲುಕಿದಾಗ ಅದಕ್ಕೆ ಬಲವಿಲ್ಲ. ಅದರ ಶಕ್ತಿ ಉಪಯೋಗಕ್ಕೆ ಬಾರದು. ತಿಮಿಂಗಿಲಕ್ಕೆ ನೀರೇ ಆಗಬೇಕು. ನೆಲದ ಮೇಲೆ ಶಕ್ತಿಹೀನ ಹಾಗೆಯೇ ಆಗಬಹುದು. ನಮ್ಮ ನಮ್ಮದು ನಮಗೆ ಶ್ರೇಷ್ಠ. ಎಲ್ಲವನ್ನೂ  ಗೌರವಿಸೋಣ, ಪ್ರೀತಿಸೋಣ, ನಮ್ಮದೆಂಬ ಮಮಕಾರ ಗುಣ ಬೆಳೆಸಿಕೊಳ್ಳೋಣ.

-ಸಂಗ್ರಹ:ರತ್ನಾ ಕೆ.ಭಟ್

(ಶ್ಲೋಕ: ಸರಳ ಸುಭಾಷಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ