ಬಾಳಿಗೊಂದು ಚಿಂತನೆ - 129

ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಆದರೆ ಅದನ್ನು ಬಳಸಿಕೊಂಡು ಬಾಳುವುದು ನಮ್ಮ ಕೈಯಿ ಬಾಯಿ, ಮನಸ್ಸಿನಲ್ಲಿ, ಆಲೋಚನೆಗಳಲ್ಲಿದೆ. ಸುಮ್ಮನೆ ಕುಳಿತರೆ ಏನೂ ಸಿಗದು. ಕಷ್ಟಪಡಬೇಕು, ಬೆವರಿಳಿಸಬೇಕು, ಗಳಿಸಬೇಕು. ದೇಹಕ್ಕೂ ಆರೋಗ್ಯ. ಇಲ್ಲದಕೆಟ್ಟ ಆಲೋಚನೆಗಳೂ ತಲೆಗೆ ಬಾರದು.
*ಷಡ್ ದೋಷಾಃ ಪುರುಷೇಣೇಹ ಹಾತವ್ಯಾ* *ಭೂತಿಮಿಚ್ಛತಾ/*
*ನಿದ್ರಾ ತಂದ್ರಾ ಭಯಂ ಕ್ರೋಧಃ ಆಲಸ್ಯಂ ದೀರ್ಘ ಸೂತ್ರತಾ//*
ತನಗೆ ಸಿರಿಸಂಪತ್ತು ಬೇಕು, ಸಂಪಾದನೆ ಮಾಡಬೇಕು ಎಂದು ಬಯಸುವ ಪುರುಷ, ನಿದ್ದೆ, ತೂಕಡಿಕೆ, ಭಯ, ಕೋಪ, ಆಲಸ್ಯ ಮತ್ತು ಕೆಲಸವನ್ನು ನಿಧಾನವಾಗಿ ಮಾಡುವ --ಈ ಆರು ದೋಷಗಳನ್ನು ಬಿಟ್ಟುಬಿಡಬೇಕು. ಇವುಗಳು ಶರೀರದಲ್ಲಿ ಅಡಕವಾದರೆ ಸಂಪಾದನೆ ಶೂನ್ಯ. ಆಲಸ್ಯ ಮಾನವನ ದೊಡ್ಡ ಶತ್ರು. ಚೆನ್ನಾಗಿ ಸರಿಯಾದ ರೀತಿಯಲ್ಲಿ ದುಡಿಯೋಣ, ಗಳಿಸೋಣ, ಉಣ್ಣೋಣ.
-ರತ್ನಾ ಕೆ ಭಟ್ ತಲಂಜೇರಿ
(ಶ್ಲೋಕ: ಸರಳ ಸುಭಾಷಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ