ಬಾಳಿಗೊಂದು ಚಿಂತನೆ - 133

ಬಾಳಿಗೊಂದು ಚಿಂತನೆ - 133

ಇಲ್ಲಿ ಧರ್ಮ ಎಂದರೆ ಒಂದು ಆಚರಣೆಯೋ, ಅನುಕಂಪವೋ, ಸಹಕರಿಸುವುದೋ, ಕೆಲಸವೋ, ಕಾಯಕವೋ, ಕರ್ಮವೋ ಆಗಿರಬಹುದು. ಧರ್ಮದ ಮರ್ಮ ಅರಿತವಗೆ ಕಷ್ಟವಿಲ್ಲ.

*ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತ:/*

*ತಸ್ಮಾದ್ಧರ್ಮಂ ತ್ಯಜೇನ್ನ್ಯೆವ ಮಾ ನೋ ಧರ್ಮೋ  ಹತೋವಧೀತ್//*

ಧರ್ಮವನ್ನು ಹಾಳುಮಾಡಿದರೆ, ನೋಯಿಸಿದರೆ ಧರ್ಮವು ಎಲ್ಲವನ್ನೂ ಘಾಸಿಗೊಳಿಸುತ್ತದೆ. ಸಂರಕ್ಷಿಸಿದವರ ಎಲ್ಲಾ ರೀತಿಯಲ್ಲೂ ಕಾಪಾಡುತ್ತದೆ. ಧರ್ಮಕ್ಕೆ ಅಪಚಾರವಾಗದಂತೆ, ನೋಯದಂತೆ ನಮ್ಮ ವ್ಯವಹಾರಗಳಿರಬೇಕು. ಈ ಸಂಕ್ರಾಂತಿಯ ಶುಭ ಅವಸರದ ಪರ್ವಕಾಲದಲ್ಲಿ ನಮ್ಮಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಚಾರವಾಗಿದ್ದರೆ ನೊಂದ ಧರ್ಮವು ನಮ್ಮನ್ನೆಲ್ಲ ನೋಯಿಸದಿರಲಿ. ಪ್ರತಿ ಸಂದರ್ಭದಲ್ಲೂ ನಮ್ಮ ಗುಣನಡತೆಗಳನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಬೇರೆಯವರು ಹೇಳುವಂತಾಗಬಾರದು. ತಪ್ಪೆಸಗಿದರೆ ತಿದ್ದಿ ನಡೆಯುವ ಮನೋಭಾವ ನಮ್ಮದಾಗಿರಬೇಕು. ಆಗ ಆ ಕಣ್ಣಿಗೆ ಕಾಣಿಸದ ದಿವ್ಯಶಕ್ತಿಯ ಆಶೀರ್ವಾದ ನಮಗಿರುತ್ತದೆಯೆಂಬ ನಂಬಿಕೆ ನಮಗಿರಬೇಕು. ನಮ್ಮ ಆಚರಣೆಗಳೇ ನಮ್ಮ ಧರ್ಮ, ಶುದ್ಧವಾಗಿಡೋಣ. ಫಲ ತುಂಬಿದ ಮರದ ಗೆಲ್ಲುಗಳು ಬಾಗುವುದನ್ನು ನೋಡಿದ್ದೇವೆ. ಅದೇ ರೀತಿ ಸದ್ಗುಣಗಳಿಂದ ಬಾಗೋಣ.

ಸಂಕ್ರಾಂತಿ ಹಬ್ಬದ ಶುಭಾಷಯಗಳು. ಎಲ್ಲರಿಗೂ ಒಳ್ಳೆಯದಾಗಲಿ

-ರತ್ನಾ ಕೆ ಭಟ್ ತಲಂಜೇರಿ 

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ