ಬಾಳಿಗೊಂದು ಚಿಂತನೆ - 134

ಬಾಳಿಗೊಂದು ಚಿಂತನೆ - 134

ನಾವು ಯಾವುದೇ ಕೆಲಸಕ್ಕೆ ಯೋಜನೆಗೆ ಕೈ ಹಾಕಿದ ತಕ್ಷಣ ಫಲ ಸಿಗದು. ಎಲ್ಲದಕ್ಕೂ ಒಂದು ಸಮಯ ಇದೆ. ಕಾಲಕ್ಕಾಗಿ ಕಾಯುವ ತಾಳ್ಮೆ ನಮಗಿರಬೇಕು. ಹೆಚ್ಚಾಗಿ ಫಲ ಸಿಗುವುದು ಕೊನೆಗೆ. ವರುಷ ಪೂರ್ತಿ ಓದಿದರೆ ಮಾತ್ರ ಮುಂದಿನ ತರಗತಿಗೆ ಹೋಗಬಹುದು. ಅಕ್ಕಿ ಒಲೆಯಲ್ಲಿ ಇಟ್ಟ ಕೂಡಲೆ ಅನ್ನ ಆಗದು. ಕಾಯಬೇಕು. ತೋಟದ ಗಿಡಮರಗಳಿಗೆ ಉತ್ತಮ ಗೊಬ್ಭರ ನೀರು ಹಾಕಿದರೆ ಮಾತ್ರ ಬೆಳೆ ತೆಗೆಯಬಹುದು. ಫಲ ಸಿಗಬಹುದು. ಆದರೆ ಕಾಯುವಷ್ಟು ತಾಳ್ಮೆ ನಮಗಿರಬೇಕು.

*ಕಾರ್ಯಸ್ಯಾಂತೇ ಫಲಂ ಯಾದೃಕ್ ತಾದೃಙ್ಮಧ್ಯೇ ನ ಶಸ್ಯತೇ/*

*ಹಾಲಾಹಲಂ ವಿನಿರ್ಯಾತಂ ಸುಧಾಯಾ ಮಥನಾಂತರೇ//*

ಸಮುದ್ರಮಥನ ಕಾಲದಲ್ಲಿ ಮೊದಲಿಗೆ ಮಹಾವಿಷ ಉತ್ಪತ್ತಿ ಆಯಿತು. ಅದನ್ನು ಪರಶಿವನು ಕುಡಿದು ವಿಷಕಂಠನೆನಿಸಿದ ವಿಚಾರಗಳನ್ನು ಓದಿದವರು ನಾವುಗಳು. ಕೊನೆಗೆ ಅಮೃತ ಸಿಕ್ಕಿತು. ಮೊದಲು ಬಂದದ್ದು ಹಾಲಾಹಲ. ಯಾವುದೇ ಕೆಲಸದ ಕೊನೆಗೆ ಬರುವ ಫಲ ಮೊದಲು ಸಿಗಲಾರದು. ಸಿಕ್ಕಿದರೂ ದಕ್ಕಲಾರದು.

-ರತ್ನಾ ಕೆ ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ