ಬಾಳಿಗೊಂದು ಚಿಂತನೆ (14) - ಸೋಲು - ಗೆಲುವು

ಬಾಳಿಗೊಂದು ಚಿಂತನೆ (14) - ಸೋಲು - ಗೆಲುವು

ನಾವೆಲ್ಲರು *ಗೆಲುವು*ಸಿಕ್ಕಾಗ ಹಿಗ್ಗುತ್ತೇವೆ. ಸಂತೋಷ ಪಡುತ್ತೇವೆ. ಎಲ್ಲರೊಂದಿಗೆ ಹಂಚಿಕೊಳ್ಳುತ್ತೇವೆ. *ಸೋಲು* ಬಂದಾಗ ಕುಗ್ಗುತ್ತೇವೆ, ಮನಸ್ಸು ಮುದುಡುತ್ತದೆ. ಅಯ್ಯೋ, ನನಗೆ ಹೀಗಾಯಿತಲ್ಲ? ಎಂದು ಹಲುಬುತ್ತೇವೆ. ಆ *ಸೋಲನ್ನು* ಸಹ ನಾವು ನಮ್ಮ ಸಮವಯಸ್ಕರೊಂದಿಗೆ, ನಮ್ಮ ಕುಟುಂಬದ ಸದಸ್ಯರೊಂದಿಗೆ, ನಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹೇಳಿಕೊಂಡು, ಮನಸ್ಸು ಹಗುರ ಮಾಡಿಕೊಳ್ಳೋಣ. ಅವರಿಂದ ಏನಾದರೂ ಉತ್ತಮ ಸಲಹೆಗಳು ಸಿಗಲೂಬಹುದು.

*ಸೋಲೇ ಗೆಲುವಿನ ಸೋಪಾನ* ಈ ಮಾತನ್ನು ಮನಸ್ಸಿನಲ್ಲಿಟ್ಟರೆ, ನಾವು ಬೇಸರಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ಸೋಲು ಕಲಿಸುವ ಪಾಠ ದೊಡ್ಡದು. ಗೆಲುವು ಎನ್ನುವುದು ಮುಕ್ತಾಯವೂ ಆಗಿರಬಹುದು. ಈ ಪಾಠ ಎನ್ನುವುದು ನಮ್ಮನ್ನು ನಿರಂತರ ಅಧ್ಯಯನ, ಚಟುವಟಿಕೆಯತ್ತ ಕೊಂಡೊಯ್ಯಬಹುದು. ಸೋಲಿಗೆ ಕುಗ್ಗದೆ ಗೆಲುವಿಗೆ ಹಿಗ್ಗದೆ *ಸ್ಥಿತಪ್ರಜ್ಜ*ರಾಗಿ ವ್ಯವಹರಿಸೋಣ.

*ಜೀವನ ಅಂದರೆ ಬಗೆಹರಿಸಬೇಕಾದ ಸಮಸ್ಯೆ ಅಲ್ಲ, ಅನುಭವಿಸಬೇಕಾದ ವಾಸ್ತವ*. ಬೇರೆಯವರನ್ನು ನೋಯಿಸದೆ, ತಾನೂ ನೋಯದೆ, ಎಲ್ಲರಂತೆ ನಾನು ಸಹ, ನನ್ನಂತೆಯೇ ಎಲ್ಲರೂ, ಎಂದು ತಿಳಿದು ಬಾಳಿದಾಗ ಬದುಕು ಸುಂದರ .

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ