ಬಾಳಿಗೊಂದು ಚಿಂತನೆ (15) - ಪರಮಸತ್ಯ
ಸತ್ಯ ನಮಗೆಲ್ಲ ತಿಳಿದ ವಿಚಾರ. *ಪರಮ ಸತ್ಯ* ಭಗವಂತನಿಗೆ ಪೂರ್ಣ ಶರಣಾಗುವುದು, ಅವನ ನಾಮವನ್ನು ಮನಸಾ ಧ್ಯಾನಿಸುವುದು, ಎಲ್ಲಾ ನಿನಗೇ ಬಿಟ್ಟದ್ದು, ನಾನು ಮಾಡುವ ಕರ್ತವ್ಯ ಮಾಡುತ್ತೇನೆ, ನೀನು ನನ್ನನ್ನು ನೋಡಿಕೊ, ಕಷ್ಟ ಸುಖ ಎರಡೂ ನಿನ್ನ ಲೀಲೆ ಎನ್ನುವುದೇ ಪರಮ ಸತ್ಯ.
ಐಹಿಕ ಇಂದ್ರಿಯಗಳ ಸುಖಭೋಗಕ್ಕೆ ಒಳಗಾದವರು ಹೊರಬರಲಾಗದೆ ಒದ್ದಾಡುತ್ತಾರೆ. ಅವರಿಗೆ ಸತ್ಯ ಬಿಡಿ, ಯಾವುದೂ ಕಣ್ಣಿಗೆ ಕಾಣಿಸದು, ಮನಸ್ಸಿಗೂ ಬಾರದು. *ಚಾಕು ಮೊಂಡಾದರೆ ನಾವು ಅದನ್ನು ಹರಿತ ಮಾಡುತ್ತೇವೆ* ಅದೇ ರೀತಿ ಇಂದ್ರಿಯಗಳನ್ನು ನಿಗ್ರಹಿಸಿ, ಭಗವಂತನ ಸೇವೆಯಲ್ಲಿ ತೊಡಗಿಸಿ ಕೊಳ್ಳುವ ಮೂಲಕ, ನಮ್ಮ ಮನಸ್ಸನ್ನು ಮೊನಚು ಮಾಡಬೇಕು. ಪರಿಶುದ್ಧ ಮನದಿಂದ ದೇವರ ಹತ್ತಿರ ಸಂಭಾಷಣೆ ಮಾಡಬಹುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ನೋಡಬಹುದು. *ಸರ್ವೋಪಾದಿ ವಿನಿರ್ಮುಕ್ತಂ ತತ್ಪರತ್ವೇ ನ ನಿರ್ಮಂಲಂ/ ಹೃಷಿಕೇಣ ಹೃಷಿಕೇಶ ಸೇವನಮ್ ಭಕ್ತಿ ರ್ ಉಚ್ಯತೇ//
ನಾನು, ನನ್ನದು, ನನ್ನ ಕುಟುಂಬ, ಎಲ್ಲವೂ ನನಗಾಗಿ, ಇಂಥ ಲಲಾಸೆಯನ್ನು, ವಾಂಛೆ ಯನ್ನು ಬಿಟ್ಟು, ನಮಗಾಗಿ,ನನ್ನ ದೇನಿಲ್ಲ ದೇವಾ, ಎಲ್ಲಾ ನಿನ್ನದೇ ಎಂಬುದು ಬಂದಲ್ಲಿ ಪರಮಸತ್ಯದ ಅರಿವು ಮೂಡಿತೆಂದೇ ಹೇಳಬಹುದು. ಭಗವದ್ಗೀತೆ, ಶ್ರೀ ಮದ್ಭಾಗವತ, ಜ್ಞಾನ ಗ್ರಂಥಗಳು ನಮಗೆ ಈ *ಪರಮಸತ್ಯದ* ದಾರಿಯನ್ನು ತೋರಲು ಸಹಾಯಕ.
ಪರಮಸತ್ಯದ ಮೂರು ಅಂಶಗಳಾದ ಬ್ರಹ್ಮನ್, ಪರಮಾತ್ಮಾ ಮತ್ತು ಭಗವಾನ್ ಇವುಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಉತ್ತಮ ಉದಾಹರಣೆ ಸೂರ್ಯ. ಸೂರ್ಯ ನು ಪ್ರಜ್ವಲಿಸುವ ಮಹಾಪ್ರಭೆ.
ಬ್ರಹ್ಮ ನ್--ಸೂರ್ಯ ಕಿರಣ, ಪರಮಾತ್ಮ-ಸೂರ್ಯನ ಗೋಳ, ಭಗವಾನ್-ಸೂರ್ಯ ದೇವ.ಇನ್ನೂ ಅರಿಯಲು *ವೇದಾಂತ ಸೂತ್ರ ಗಳನ್ನು*ಓದಬಹುದು.
(ಸಂಗ್ರಹ;ಧರ್ಮ ಏಕೆ?ಏನು?)
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ