ಬಾಳಿಗೊಂದು ಚಿಂತನೆ - 151

ಬಾಳಿಗೊಂದು ಚಿಂತನೆ - 151

ಕೆಲವು ಜನ ಬೇಕು ಬೇಕೆಂದೇ ಕಾಲೆಳೆದುಕೊಂಡು ಬರುವವರು ನಮ್ಮ ಸುತ್ತಮುತ್ತ ಇರುತ್ತಾರೆ. ಮೊದಮೊದಲು ನಮ್ಮ ಅರಿವಿಗೆ ಇದು ಬಾರದಿರಬಹುದು. ಅನಂತರ ನಿಧಾನದಲ್ಲಿ ಪದೇ ಪದೇ ಹೀಗಾದಾಗ ನಮಗೆ ಅವರ ಬುದ್ಧಿ ಗೊತ್ತಾಗುವುದು. ಇದಕ್ಕೆ ಮದ್ದು ‘ಮೌನ ವಹಿಸುವದೇ ದಾರಿ’. ಕಾಲು ಕೆರೆದುಕೊಂಡು ಜಗಳಕ್ಕೆ ಬರುವವರನ್ನು ಬಾಯಿ ಕಟ್ಟಿ ಹಾಕಲು ಸಾಧ್ಯವಾಗದ ಮಾತು. ಕೋಳಿ ಜಗಳ ಹೇಳ್ತಾರೆ ಹಳ್ಳಿ ಕಡೆ ಇದನ್ನು. ಅವರ ದರ್ಪಕ್ಕೆ, ಅಹಂಕಾರಕ್ಕೆ ಉದಾಸೀನವೇ ಔಷಧ.

*ವೃಥಾ ವೈರಂ ವಿವಾದಂ ಚ ನ ಕುರ್ಯಾತ್ ಕೇನಚಿತ್ಸಹ/*

*ಅರ್ಥಾಭಾವೇಪಿ ತತ್ ಪುಂಸಾಂ ಅನರ್ಥಾ ಏವ ಕಲ್ಪತೇ//*

ವಿನಾ ಕಾರಣ ಬಂದರೂ ವೈರತ್ವ ಕಟ್ಟಿಕೊಳ್ಳುವುದು ಬೇಡ. ಬಂಡೆಗೆ ತಲೆಯನ್ನು ಬಡಿದರೆ ಬಂಡೆಗೇನೂ ಆಗದು. ಬಡಿದವನ ತಲೆ ಹೋಗಬಹುದು ಅಲ್ಲವೇ? ವಾದ ಮಾಡಬೇಕು ಅದರಲ್ಲಿ ಏನಾದರೂ ಹುರುಳಿದ್ದರೆ. ಇಲ್ಲದಿದ್ದರೆ ವಾದ ಸಲ್ಲದು. ಆರೋಗ್ಯವೂ ಹಾಳು. ಲಾಭವಂತು ಇಲ್ಲ. ಅನರ್ಥವನ್ನು ಎಳೆದು ಹಾಕುವುದರಲ್ಲಿ ಅರ್ಥವಿಲ್ಲ. ಯಾರು ಏನೇ ಹೇಳಿದರೂ ನಾವು ನಾವಾಗಿಯೇ ಇರೋಣ. ನ್ಯಾಯವಾದ್ದಕ್ಕೆ ಮಾತ್ರ ಒಡಂಬಡೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ