ಬಾಳಿಗೊಂದು ಚಿಂತನೆ - 154
ವಿವೇಕಿಗಳಾದವರು ಕಳೆದುಕೊಂಡುದರ ಬಗ್ಗೆ ಚಿಂತಿಸುವುದಿಲ್ಲ. ಎಷ್ಟೇ ಕಷ್ಟ ಬಂದರೂ ಹೆದರುವುದಿಲ್ಲ, ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ತಮಗೇನಾದರೂ ಸಿಗದಿದ್ದರೂ ಬೇಸರಪಡುವುದಿಲ್ಲ. ಸ್ಥಿತಪ್ರಜ್ಞರು ತಮಗೆ ಎಷ್ಟು ದಕ್ಕುವುದೋ ಅದರಲ್ಲೇ ತೃಪ್ತಿ.
*ನಾ ಪ್ರಾಪ್ಯಮಭಿವಾಂಛಂತಿ ನಷ್ಟಂ ನೇಚ್ಛಂತಿ ಶೋಚಿತುಮ್/*
*ಆಪತ್ಸು ಚ ನ ಮುಹ್ಯಂತಿ ನರಾ: ಪಂಡಿತಬುದ್ಧಯ://*
ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ವಿವೇಕಿಗಳ ಗುಣ. ತಲೆ ಮೇಲೆ ಸಾಲಮಾಡಿ ಕೊಂಡು, ನಾಳೆ ಯಾರಿಗೂ ಹಿಂದೆ ಕೊಡದೆ, ಎಲ್ಲರ ಮಾತುಗಳನ್ನು ಅವರು ಕೇಳಲು ಇಷ್ಟಪಡುವುದಿಲ್ಲ. ತಮ್ಮ ಸಾಮರ್ಥಮೀರಿ ಹೋಗಲಾರರು. ಆದಷ್ಟೂ ಕಳಂಕ ಬಾರದಂತೆ ಸಮಾಜದಲ್ಲಿ ದುಡಿಯಲು ಪ್ರಯತ್ನಿಸುತ್ತಾರೆ. ಸುಮ್ಮನೆ ಆಪಾದನೆ ಮಾಡಿದರೆ, ಕೇಳಿಸಿಕೊಂಡು ಕೂರುವವರಲ್ಲ. ಕೆಣಕಿದರೆ ಬಿಡಲಾರರು. ದಯೆ, ದಾಕ್ಷಿಣ್ಯ, ಪಾಪ ಪುಣ್ಯಗಳನ್ನು ತಕ್ಕಡಿಯಲಿಟ್ಟು ನೋಡುವವರು. ಬಹಳ ಜಾಗ್ರತೆಯಿಂದ ಮಾತನಾಡುವವರು. ಯಾರಾದರೂ ಸಹಾಯ ಕೇಳಿಕೊಂಡು ಬಂದರೆ ಕೈಲಾದ ಸಹಕಾರ ಮಾಡುವವರು. ಓರ್ವನ ಕಷ್ಟವನ್ನು ಕಂಡು ಮರುಗುವವರು. ನಾಲ್ಕು ಜನರಿಗೆ, ಸಾಧುಗಳಿಗೆ, ಹಿರಿಯರಿಗೆ, ವೃದ್ಧರಿಗೆ, ಕೈಲಾಗದವರಿಗೆ, ಮಕ್ಕಳಿಗೆ, ಅಸಹಾಯಕರಿಗೆ ಸಹಾಯಹಸ್ತ ಚಾಚೋಣ.
-ರತ್ನಾ ಭಟ್ ತಲಂಜೇರಿ
(ಶ್ಲೋಕ: ಸಂಸ್ಕತಿ ಸಂಚಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ