ಬಾಳಿಗೊಂದು ಚಿಂತನೆ - 17 (ಚಾಣಕ್ಯ ನೀತಿ)
ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯಕರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು ಪೂರೈಸುವಲ್ಲಿ, ಸಾಧಿಸುವಲ್ಲಿ ಪ್ರಯತ್ನಿಸಿ, ಸಫಲನಾಗಬೇಕು. ನಾವು ಈ ಜಗತ್ತನ್ನೇ ಬಿಟ್ಟು ಹೋದ ಮೇಲೆ, ಸಾಧಿಸುವುದಾದರೂ ಏನಿದೆ? ಒಳ್ಳೆಯ ರೀತಿಯಲ್ಲಿ ಗುಣನಡತೆಗಳನ್ನು ಹೊಂದಿ, *ಹಾಸಿಗೆ ಇದ್ದಷ್ಟೇ ಕಾಲು ಚಾಚಿ* ನಮಗೆ ಬೇಕಾದ್ದನ್ನು *ಇತಿಮಿತಿ* ಅರಿತು ಪಡೆದುಕೊಳ್ಳಲು ಪ್ರಯತ್ನಿಸೋಣ.
***
ತನ್ನವರು ಎನಿಸಿಕೊಂಡವರಿಂದಾಗುವ ಅವಮಾನ, ಕಡು ಬಡತನ, ಶ್ರೀಮಂತರು ದೊಡ್ಡವರು ಅನಿಸಿಕೊಂಡವರ ಹತ್ತಿರ ದುಡಿಯುವುದು, ನಮಗೆ ಆಗದೆ ಇರುವವರ ಜೊತೆ ಕುಳಿತು ಚರ್ಚೆ, ವಿಚಾರ ಗೋಷ್ಠಿಯಲ್ಲಿ ಭಾಗವಹಿಸುವುದು, ವಿಪರೀತ ಸಾಲದ ಹೊರೆ, ಗಂಡ ಹೆಂಡತಿಯರು ಪರಸ್ಪರ ಒಬ್ಬರನ್ನೊಬ್ಬರು ಕಳೆದುಕೊಳ್ಳುವುದು ಇವುಗಳೆಲ್ಲ ಬೆಂಕಿ ಇಲ್ಲದೆಯೇ ದೇಹವನ್ನು ಸುಡುವವು.
***
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್