ಬಾಳಿಗೊಂದು ಚಿಂತನೆ - 18
ಒಮ್ಮೊಮ್ಮೆ ನಮಗೆ ಅನಿಸುವುದು ನಾನೇ ಎಲ್ಲಾ ಗೊತ್ತಿದ್ದವ, ನನ್ನಿಂದಾಗಿಯೇ ಎಲ್ಲವೂ ಎಂಬುದಾಗಿ. ಈ ಹುಚ್ಚು ಮನಸ್ಸಿನ ಗೊಂದಲದಿಂದಾಗಿ ಅನಾಹುತಗಳು ಹುಟ್ಟಿಕೊಳ್ಳುತ್ತವೆ. ನನಗೆ ಯಾರೂ ಬೇಡ, ನಾನೇ ಎಲ್ಲಾ ಎಂಬುದನ್ನು ಬಿಟ್ಟು ಬಿಡೋಣ. ಇಂಥ ಅಭಿಮಾನ ಒಳ್ಳೆಯದಲ್ಲ. ನಾನು ಎಲ್ಲರಿಗೂ ಬೇಕೆಂಬ ಭ್ರಮೆಯೂ ಬೇಡ. ಆ ಭಗವಂತನ ಇಚ್ಛೆ ಏನಿದೆಯೋ ಅದರಂತೆ ಎಲ್ಲವೂ ನಡೆಯುವುದು. ನಾವು ಕೇವಲ ನಿಮಿತ್ತ ಮಾತ್ರ.
***
ನ ಸತ್ಯಂ ಕೇವಲಂ ಸತ್ಯಂ ಅನೃತಂ ನ ತಥಾನೃತಂ/ಹಿತಂ ಯತ್ ಸರ್ವಲೋಕಸ್ಯ ತತ್ಸತ್ಯಂ ಶೇಷಮನ್ಯತಾ//
ಇರುವಂಥ ಸತ್ಯ ವಿಚಾರವನ್ನು ಇದ್ದ ಹಾಗೆ ಹೇಳಿದರೆ ಅದು ಸತ್ಯ ವಾದ್ದು ಎಂದು ಪರಿಗಣಿಸದು. ಸತ್ಯವಲ್ಲದ ವಿಚಾರವನ್ನು ಅಸತ್ಯ ಎಂದು ಹೇಳಲೂ ಆಗದು. ಸತ್ಯ-ಅಸತ್ಯಗಳ ಮಧ್ಯೆ ತುಂಬಾ ವ್ಯತ್ಯಾಸ ,ಗೊಂದಲಗಳಿವೆ. ಲೋಕಹಿತವಾದ್ದು ಯಾವುದೇ ಇರಲಿ ಅದು ಸತ್ಯ ವಿಚಾರ. ಅಪ್ರಿಯವಾದ ಯಾವುದೇ ವಿಚಾರಗಳು ಅಸತ್ಯವಾದ್ದು. ನಮಗೆ ಸತ್ಯ ಎನಿಸಿದ್ದನ್ನು ಸ್ವೀಕರಿಸೋಣ.
(ಭಾರತ ಕಥಾ ಮಂಜರಿ)
***
-ರತ್ನಾ ಭಟ್ ತಲಂಜೇರಿ