ಬಾಳಿಗೊಂದು ಚಿಂತನೆ (19) - ಒಂದು ಮಾತು

ಬಾಳಿಗೊಂದು ಚಿಂತನೆ (19) - ಒಂದು ಮಾತು

ಮನುಷ್ಯನ ಬದುಕು ಕೇವಲ ಮೂರು ದಿನದ್ದು.*ಹುಟ್ಟು-ಸಾವು*ಇವುಗಳ ಮಧ್ಯೆ ಒಂದಷ್ಟು ಜೀವನ.ಆದರೆ ಆ ನಡುವಿನ ಜೀವನದಲ್ಲಿ ನಾವು ಏನೆಲ್ಲ ಸರ್ಕಸ್ ಮಾಡ್ತೇವೆ. ಈ ಲೌಕಿಕ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸದೆ, ಒಂದು ಹೆಜ್ಜೆ ಸಹ ಮುಂದೆ ಇಡಬಾರದು. ಇಟ್ಟೆವೋ ನಾವು ಕೆಟ್ಟೆವು ಎಂದೇ ಅರ್ಥ. ಅತಿಯಾದ ಮೋಹದ ಜೀವನ ನಮಗೆ ಬೇಡವೇ ಬೇಡ.

ಯಾರನ್ನು ಗಟ್ಟಿಯಾಗಿ ಅಂಟಿಕೊಂಡಿರುತ್ತೇವೆಯೋ, ಅವರು ಕೊಡುವಷ್ಟು ನೋವು ಬೇರೆ ಯಾರೂ ಕೊಡಲಾರರು. ಗಟ್ಟಿ ಬಂಧನಗಳಿಗೆ ಅಂಟುವುದನ್ನು ಬಿಡೋಣ. ಸುಮ್ಮನೆ ನೋವು ತಿನ್ನುವುದಕ್ಕಿಂತ, ಬಿಡಿಸಿಕೊಂಡು ಹೊರಬರುವುದೇ ಜಾಣತನ.*ಕೆಲವೊಂದು ಸಲ ಕಣ್ಣಿದ್ದೂ ಕುರುಡಾಗುತ್ತೇವೆ. ಕಿವಿಯಿದ್ದೂ ಕಿವುಡರಾಗುತ್ತೇವೆ. ಬಾಯಿಯಿದ್ದೂ ಮೂಗರಾಗುತ್ತೇವೆ. ಆದ್ದರಿಂದ ಬದುಕಿನ ಹಾದಿಯಲ್ಲಿ ಎಲ್ಲವೂ ಹಿತ ಮಿತವಾಗಿರಲಿ.

***

ನಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ಪ್ರತಿ ಪ್ರಶ್ನೆಗಳಿಗೆ, ಉತ್ತರವನ್ನು ಅರಸುತ್ತಾ ಹೋದರೆ ಏನೂ ಪ್ರಯೋಜನವಿಲ್ಲ. ಮನಸ್ಸಿನ ನೆಮ್ಮದಿ ಕೆಡುವುದರ ಜೊತೆ ನಮ್ಮ ಆರೋಗ್ಯವೂ ಹಾಳಾಗುತ್ತದೆ. ಇದರಿಂದ ಸಮಯ ಸಂದರ್ಭ ನೋಡಿಕೊಂಡು, ಕೆಲವು ಪ್ರಶ್ನೆಗಳನ್ನು ಹಾಗೆಯೇ ಬಿಟ್ಟು ಬಿಡುವುದು ಒಳ್ಳೆಯದು. ಉತ್ತರಿಸಲು ಹೋಗಿ ಗೊಂದಲಕ್ಕೆ, ಮುಜುಗರಕ್ಕೆ ಒಳಗಾಗುವುದು ಬೇಡ. ಇದರಿಂದ ಕ್ಷೇಮ ಸಹ.

ಈ ಪ್ರಪಂಚದಲ್ಲಿ ನಾವು ಮೂವರಿಗೆ ಭಯ ಪಡುತ್ತೇವಂತೆ.

೧- ನಮ್ಮ ಎಲ್ಲವನ್ನೂ ನೋಡಿಕೊಳ್ಳುವ ದೇವರಿಗೆ.

೨- ಆ ಭಗವಂತನಿಗೂ ಹೆದರದವರಿಗೆ.

೩- ನಮ್ಮೊಳಗಿನ ನಮಗೆ.

(ಸಂಗ್ರಹ)

-ರತ್ನಾ ಭಟ್ ತಲಂಜೇರಿ