ಬಾಳಿಗೊಂದು ಚಿಂತನೆ - 225

ಬಾಳಿಗೊಂದು ಚಿಂತನೆ - 225

ಒಳ್ಳೆಯ ಕೆಲಸಗಳನ್ನು ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತೇವೆ. ಪ್ರಶಂಸೆ ಮಾಡುತ್ತೇವೆ. ಹುರಿದುಂಬಿಸುತ್ತೇವೆ. ಇದು ಕೆಲಸವಿಲ್ಲದೆ ಅಥವಾ ಸಮಯ ಕಳೆಯಲು, ತೋರಿಕೆಗೋ ಅಲ್ಲ. ಅವನು/ಅವಳು ಇನ್ನಷ್ಟೂ ಬೆಳೆಯಲಿ, ಸಾಧಿಸಲಿ ಎಂಬ ಕಾರಣದಿಂದ. ಹಾಗೆಂದು ಸುಮ್ಮ ಸುಮ್ಮನೆ ಹೊಗಳಲೂ ಬಾರದು, ತೆಗಳಲೂ ಬಾರದು. ಯಾರನ್ನೋ ಮೆಚ್ಚಿಸಲು, ಓಲೈಸಲು ಪ್ರಶಂಸೆಯೆಂಬ ಅಸ್ತ್ರವನ್ನು ಎಂದೂ ಬಳಸಬಾರದು. ಅದು ಕೊರಳಿಗೆ ಉರುಳಾಗಿ ಕಾಡಬಹುದು.

*ಪ್ರಶಂಸಾ ನಕ್ರಸಂಕಾಶಾ ನರಾನಾಂತಂ ಗಿಲತ್ಯಹೋ/*

*ಆಕ್ಷೇಪ: ಸ್ನಾನಸಂಕಾಶ: ಕ್ಷಾಲಯತ್ಯಾಂತಮಂಜಸಾ//*

ಅಂಕೆಯಿಲ್ಲದ ಪ್ರಶಂಸೆ, ಹೊಗಳಿಕೆ ಎಂಬುದು ಮಾನವನನ್ನು ಮೊಸಳೆಯಂತೆ ನುಂಗಿಬಿಡಬಹುದು. ಆದರೆ ವಿವೇಕದಿಂದ ಕೂಡಿದ ವಿಮರ್ಶೆಯು ಪವಿತ್ರವಾದ ತೀರ್ಥಸ್ನಾನದಂತೆ ಮನುಷ್ಯನ ಬಾಹ್ಯ-ಆಂತರಿಕವೆರಡನ್ನೂ ಶುದ್ಧಮಾಡಿ ಚೊಕ್ಕಟಗೊಳಿಸಬಹುದು. ನ್ಯಾಯದಿಂದ ಕೂಡಿದ ಸತ್ಕಾರ್ಯಗಳನ್ನು ಮಾಡಿ, ಹೊಗಳಿಕೆ ಬಗಲಿಗೆ ಬೀಳಲಿ. ವಿವೇಚನೆಯಿಂದ ಕೂಡಿರಲಿ.

-ರತ್ನಾ ಕೆ ಭಟ್ ತಲಂಜೇರಿ

(ಶ್ಲೋಕ: ನಿತ್ಯನೀತಿ ಸಂಗ್ರಹ) ಚಿತ್ರ ಕೃಪೆ: ಇಂಟರ್ನೆಟ್ ಸಂಗ್ರಹ