ಬಾಳಿಗೊಂದು ಚಿಂತನೆ - 26

ಬಾಳಿಗೊಂದು ಚಿಂತನೆ - 26

ಗುಣವದ್ವಸ್ತುಸಂಸರ್ಗಾದ್ಯಾತಿ ಸ್ವಲೋಪಿ ಗೌರವಮ್/

ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ//

ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು. ಉತ್ತಮರ ಸಂಪರ್ಕ ಹೊಂದಿದವನಿಗೆ ಯಾವತ್ತೂ ಒಳ್ಳೆಯದೇ ಆಗುವುದು. ಹೇಗೆ ಹೂವಿನೊಂದಿಗೆ ದಾರ(ನಾರು) ಸಹ ದೇವರ ಮುಡಿಗೇರುವುದೋ ಹಾಗೆ.

ಅದಕ್ಕೆ ಹಿರಿಯರು ಹೇಳುವ ಒಂದು ಮಾತಿದೆ'*ಸ್ನೇಹ, ಗೆಳೆತನ ಮಾಡುವಾಗ ನೋಡಿ ಮಾಡು* ಎಂಬುದಾಗಿ.

***

ನಮ್ಮ ಜೀವನ ಎನ್ನುವುದು ಉದ್ದದ. ಒಂದು ಹಾದಿ ಇದ್ದ ಹಾಗೆ. ನಡೆದಷ್ಟೂ ಕಾಲಿನಲ್ಲಿರುವ ಚಪ್ಪಲಿಗಳು ಸವೆಯಬಹುದು. ಚಪ್ಪಲಿ ಹಾಳಾದರೆ ಇನ್ನೊಂದು ಖರೀದಿಸಬಹುದು. ಹೋಗುವ ದಾರಿಯಲ್ಲಿ ಅಡೆತಡೆಗಳು ಸಹಜ. ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವ ಚಾಕಚಕ್ಯತೆ ನಮಗಿರಬೇಕು. ನಮ್ಮ ಬದುಕಿನಲಿ ಪ್ರಾಣ, ಯೌವನ, ಕಾಲ ಈ ಮೂರು ಪುನಃ ಬರುವುದಿಲ್ಲ. ಹಾಗಾಗಿ ನಾವು ಜಾಗೃತೆ ವಹಿಸಲೇ ಬೇಕಲ್ಲವೇ?

ಆಧಾರ:ನಿತ್ಯ ನೀತಿ

-ರತ್ನಾ ಭಟ್ ತಲಂಜೇರಿ