ಬಾಳಿಗೊಂದು ಚಿಂತನೆ - 35
ಸಮಸ್ತ ಜಗತ್ತಿಗೂ ತಂದೆ ಆ ಪರಮೇಶ್ವರ. ತಂದೆ ಹೇಗೆ ತನ್ನ ಕಂದನನ್ನು ಪೋಷಿಸುವನೋ ಹಾಗೆ ಆ ಶಂಕರನು, ಈಶ್ವರನು ಜಗದ ಜೀವರಾಶಿಗಳನ್ನು ಕಾಪಾಡುತ್ತಾನೆ ಎನುವ ನಂಬಿಕೆ ನಮ್ಮದು.
ಪಿತಾ ಯಥಾ ರಕ್ಷತಿ ಪುತ್ರ ಮೀಶ
ಜಗತ್ಪಿತಾ ತ್ವಂ ಜಗತಃ ಸಹಾಯಃ/
ಕೃತಾಪರಾಧಂ ತವ ಸರ್ವಕಾಲೇ
ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ//
ನಾವು ಈಶ್ವರ ದೇವರನ್ನು ನಿರ್ಗುಣ ಸಂಪನ್ನ, ನಿರಾಕಾರ, ಎಂದು ಹೇಳುವುದಿದೆ. ತಂದೆ, ಶ್ರೇಷ್ಠನಾದ ಗುರು, ಸರಿಸಮಾನರಾದವರು ಬೇರೆ ಯಾರೂ ಇಲ್ಲ. ಅಪ್ರತಿಮ ಪ್ರಭಾವವಿರುವವನು. ತಂದೆ ಮಗನ ಸಂಬಂಧದಂತೆ ಬಹಳ ಬೆಲೆಯುಳ್ಳ ಬಂಧವಾಗಿದೆ.ಸನ್ಮಾರ್ಗದಲ್ಲಿ ನಡೆಸುವವನು,ಬುದ್ಧಿ ತಿದ್ದುವವನು, ಭಯಮುಕ್ತಿಗೊಳಿಸುವವನು ಆಗಿದ್ದಾನೆ. ಅಂಧಕಾರದ ಭಯ ಹೋಗಲಾಡಿಸಲು, ಸೂರ್ಯ, ಚಂದ್ರ, ತಾರೆಗಳ ಸೃಷ್ಟಿಯಾಯಿತು. ಹಸಿವಿನ ಶಮನಕ್ಕಾಗಿ ದವಸಧಾನ್ಯ, ನದಿಗಳು, ಹಸಿರು ಸಸ್ಯಗಳು ಸೃಷ್ಟಿಯಾಯಿತು. ಇದಕ್ಕೆಲ್ಲ ಈಶ್ವರಾನುಗ್ರಹ ಕಾರಣವಾಯಿತು.
ಎಲ್ಲಾ ಶಾಸ್ತ್ರಗಳ ಸೃಷ್ಟಿಯಾಗಿ, ಅದರಲ್ಲಿ ಸತ್ಕರ್ಮ, ದುಷ್ಕರ್ಮಗಳ ಮರ್ಮವನ್ನು ನೀಡಲಾಯಿತು. ಯಾವಾಗ ಜಗತ್ತಿನಲ್ಲಿ ಜೀವರಾಶಿಗಳ ಉದ್ಭವವಾಯಿತೋ ಆಗಲೇ ಸನ್ಮಾರ್ಗದಲ್ಲಿ ನಡೆಯುವ ದಾರಿ ಸಹ ಆ ಭಗವಂತ ನೀಡಿ ಸಹಕರಿಸಿದನು.
-ರತ್ನಾ ಭಟ್, ತಲಂಜೇರಿ.
ಆಕರ ಗ್ರಂಥ:ಪುರಾಣ ಉಪದೇಶ ಸುಧಾ.