ಬಾಳಿಗೊಂದು ಚಿಂತನೆ - 38

ಒಳ್ಳೆಯ ಮತ್ತು ಕೆಟ್ಟ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗೂ ಆಗಬಹುದು ಹಾಗೂ ಆಗಬಹುದು.
*ಪಾತ್ರಾಪಾತ್ರಾ ವಿಶೇಷೋಸ್ತಿ ಧೇನು ಪನ್ನಗಯೋರಿವ/
ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್//*
ಒಳ್ಳೆಯದರಲ್ಲಿ ಕೆಟ್ಟದರಲ್ಲಿ ಇರುವ ವ್ಯತ್ಯಾಸಗಳು ನಮಗೆ ಗೊತ್ತಾಗಿಯೇ ಆಗುತ್ತದೆ. ದನಗಳು ಹುಲ್ಲನ್ನು ತಿಂದು ನಮಗೆ ಹಾಲು ಕೊಡುತ್ತದೆ. ಅದೇ ಹಾಲನ್ನು ಕುಡಿದ ವಿಷಸರ್ಪವೊಂದು, ಅಮೃತದ ಹಾಗಿರುವ ಹಾಲನ್ನು ಕುಡಿದು, ವಿಷವನ್ನು ಕಕ್ಕುತ್ತದೆ, ಉತ್ಪಾದಿಸುತ್ತದೆ.
ಹಾಗೆಯೇ ನಮ್ಮ ಕೈಯಿಂದ ಉಪಕಾರ ಪಡೆದವರು ನಮ್ಮನ್ನು ನೋಡುವಾಗ ಪರಿಚಯವಿಲ್ಲದವರ ಹಾಗೆ ಮಾಡುತ್ತಾರೆ. ಸ್ವಭಾವ ಏನೂ ಮಾಡಲಾಗದು.
(ಆಧಾರ:ಪ್ರಸಂಗಾಭರಣ )
***
ನಮ್ಮ ಬದುಕಿಗೆ ದಾರಿ ತೋರಿಸುವ ಹಲವಾರು ಪ್ರಕ್ರಿಯೆಗಳಿರಬಹುದು. ಆಯ್ಕೆ ನಮಗೆ ಬಿಟ್ಟದ್ದು. ನಮ್ಮ ಯೋಚನೆಗಳನ್ನು ಸರಿಯಾಗಿ ಗಮನಿಸಿ ಕಾರ್ಯ ರೂಪಕ್ಕೆ ತಂದಾಗ ಅವೇ ಮಾತಾಗಿ ರೂಪುಗೊಳ್ಳುತ್ತವೆ.
ಮಾತುಗಳನ್ನು ಗಮನಿಸಿ ಮನಸ್ಸು ಮಾಡಿದರೆ ಕೃತಿಯಾಗಿಸಬಹುದು. ಕೃತಿಯು ಓದಲು, ಬರೆಯಲು ಅಭ್ಯಾಸಕ್ಕೆ ಪೂರಕ. ಅಭ್ಯಾಸಗಳೇ ಮುಂದೆ ಸ್ವಭಾವ ಗಳಾಗಿ ಬದಲಾವಣೆಗಳಾಗುತ್ತವೆ. ಸ್ವಭಾವಗಳೇ ಮುಂದೊಂದು ದಿನ ಚರಿತ್ರೆ ಯಾಗಿ ಶಾಶ್ವತವಾಗಬಹುದು.
ಎಲ್ಲವನ್ನೂ ಯೋಚಿಸಿ, ಯೋಜಿಸಿ ಕಾರ್ಯಗತಗೊಳಿಸುವುದು ನಮ್ಮ ನಮ್ಮ ಕೈಯಲ್ಲಿದೆ. ಸಹಕಾರ ಪಡೆದುಕೊಳ್ಳುವುದು ಅವರವರ ಸಾಮರ್ಥದ ಮೇಲಡಗಿದೆ.
(ಆಧಾರ:ಅನುಭವ ಸೂಕ್ತಿ.)
-ರತ್ನಾ ಭಟ್ ತಲಂಜೇರಿ