ಬಾಳಿಗೊಂದು ಚಿಂತನೆ - 39

ಬಾಳಿಗೊಂದು ಚಿಂತನೆ - 39

ಇತರರ ತಪ್ಪುಗಳನ್ನು ನೋಡಿ ನಾವು ಪಾಠ ಕಲಿಯೋಣ. ನಮ್ಮಿಂದ ತಪ್ಪುಗಳಾಗದ ಹಾಗೆ ಜಾಗೃತೆ ವಹಿಸೋಣ. ನಾಳೆ ನೋಡೋಣ, ನಾಡಿದ್ದು ಕಲಿಯೋಣ ಎಂಬ ಉಡಾಫೆಯಾಗಲಿ, ಸೋಮಾರಿತನವಾಗಲಿ ಬೇಡ. ಇಂದಿನ ಈ ಕಾಲಘಟ್ಟದಲ್ಲಿ ಯಾವುದೂ ನಿಶ್ಚಿತವಿಲ್ಲ. ಇರುವುದನ್ನು ಇರುವಷ್ಟು ದಿವಸ ಕಲಿತು, ಅನುಭವಿಸುವುದು ಜಾಣತನ.ಇದ್ದುದರಲ್ಲಿಯೇ ತೃಪ್ತಿ ಹೊಂದುವುದು ಮತ್ತೂ ಜಾಣತನ. ಯಾಕೆಂದರೆ ಭಗವಂತ ನಮಗಿತ್ತ ಆಯುಷ್ಯವನ್ನು ಬಲ್ಲವರಾರಿಲ್ಲ. ನಮಗೆ ಮೊದಲೇ ಅದರ ಅರಿವಿಲ್ಲ. ನಮ್ಮನಮ್ಮ ನಿಲ್ದಾಣಗಳು ಬಂದಾಗ ಹೋಗಲೇ ಬೇಕು, ಇಳಿಯಲೇ ಬೇಕಲ್ಲವೇ?

***

ತನ್ನ ಮನಸ್ಸಿನ ಮೇಲೆ ತನಗೆ ಹಿಡಿತ ಇಲ್ಲದವನು, ಬೇರೆಯವರ ಮನಸ್ಸಿನ ಹಿಡಿತದ ಬಗ್ಗೆ ಹೇಗೆ ಹೇಳಲು ಸಾಧ್ಯ? ಹಿಡಿತವಿಲ್ಲದ ವ್ಯಕ್ತಿ ಇತರರ ಮಾತನ್ನು ನಂಬುವುದು ಹೆಚ್ಚು. ಅವನು ಸ್ವತಂತ್ರ ಅಂಥ ಅನಿಸುವುದೇ ಇಲ್ಲ. ಮನಸ್ಸಿನ ಮೇಲೆ ಹಿಡಿತ ಸಾಧಿಸುವವ ಶ್ರೇಷ್ಠ ಅನಿಸಲ್ಪಡುತ್ತಾನೆ.

-ರತ್ನಾ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ