ಬಾಳಿಗೊಂದು ಚಿಂತನೆ - 42

ಬಾಳಿಗೊಂದು ಚಿಂತನೆ - 42

ಕಲಿಯುಗದಲ್ಲಿ ಏನಾಗಬಹುದು ಎಂದು ಯಾರೋ ಭಗವಂತನ ಹತ್ತಿರ ಕೇಳಿದಾಗ, "ಒಳ್ಳೆಯ ಸಾಧು ಸಂತರಿಗೆ, ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಸದಾಕಾಲ ನಿಂದನೆಗಳು, ಕೆಟ್ಟ ಹೆಸರು ಜಾಸ್ತಿ ಜಾಸ್ತಿ ಬರಬಹುದು" ಎಂದನಂತೆ. ಇದಕ್ಕೆ ಪರಿಹಾರ ಇಲ್ವೇ? ಎಂದು ಕೇಳಿದಾಗ, ದೇವರು ಹೇಳಿದ ಮಾತು "ಅಂಥವರಿಗೆ ಮಾನಸಿಕ ಸ್ಥ್ಯೆರ್ಯ, ಧೈರ್ಯ, ಸ಼ಹನೆ, ಎಲ್ಲಾ ಕೇಳಿಸಿಕೊಂಡರೂ ಇನ್ನಷ್ಟು ಗಟ್ಟಿತನ ದಯಪಾಲಿಸ್ತೇನೆ"ಎಂದನಂತೆ. ಇದು ಸತ್ಯವಿರಬಹುದೇ ಅನಿಸ್ತದೆ ಒಮ್ಮೊಮ್ಮೆ. ತುಳಿದವರಿಗೆ ಮತ್ತೆ ಮತ್ತೆ ತುಳಿಯುವುದು ಕಾಣ್ತಾ ಇದೆ.

ಹಾಗಾದರೆ ರಾಮ. ರಾವಣರನ್ನು ಕಾಣಲು ರಾಮಾಯಣಕ್ಕೆ ಹೋಗಬೇಕಾಗಿಲ್ಲ ಅಲ್ಲವೇ? ಈಗ ಸಹ ನೋಡಬಹುದು. ನಮ್ಮಲ್ಲೇ ರಾಮನೂ ಇದ್ದಾನೆ, ರಾವಣನೂ ಅಡಗಿದ್ದಾನೆ.

ನಾವೀಗ ನೋಡಿದ ಹಾಗೆ ಸಮಾಜದಲ್ಲಿ ದೀನರು, ಅಸಹಾಯಕರು, ಬಡವರು, ಹೊಟ್ಟೆಗಿಲ್ಲದವರು, ಒಪ್ಪೊತ್ತಿನ ಕೂಳಿಗೂ ಗತಿಯಿಲ್ಲದೆ ನರಳ್ತಾ ಇದ್ದಾರೆ. ಉಳ್ಳವರು ಮತ್ತೂ ಮತ್ತೂ ಮೆರೆಯುತ್ತಿದ್ದಾರೆ. ಆಗಲಿ ಕೈನೀಡಿ ಕೊಡುವ ಬುದ್ಧಿ ಆದರೂ ಇದೆಯಾ? ಅದೂ ಇಲ್ಲ.

ಒಳ್ಳೆಯ ಕೆಲಸ ಮಾಡುವವರಿಗೆ ಕೆಟ್ಟ ಹೆಸರು ಸಾಲು ಸಾಲು ಬೆನ್ನಟ್ಟಿ ಬರುತ್ತಿದೆ. ಕೆಟ್ಟ ಕೆಲಸ ಮಾಡುವವ ವಿಜೃಂಭಿಸ್ತಾ ಇದ್ದಾನೆ. ಬಹುಶಃ *ಕೊಡ ತುಂಬಿಲ್ಲ* ಅಂಥ ಅರ್ಥೈಸಿಕೊಳ್ಳಬೇಕಷ್ಷೆ.

ಏನೇ ಇರಲಿ ಇಂದಿನ ವಿದ್ಯಮಾನಕ್ಕೆ  ತಕ್ಕಂತೆ ವ್ಯವಹರಿಸುವುದು ಧರ್ಮ. ಈ ಕಾಲಘಟ್ಟದಲ್ಲಿ ಪರಿಸ್ಥಿತಿಯನ್ನು ಎದುರಿಸುವ ಸಿದ್ಧತೆ ಎಲ್ಲರಲ್ಲೂ ಜಾಗೃತವಾಗಬೇಕು. ಜವಾಬ್ದಾರಿ ಬಂದಂತೆ ಭವಿಷ್ಯದಲ್ಲಿ ಕಷ್ಟಗಳು ಕಡಿಮೆಯಾಗಬಹುದೆಂಬ ಆಶಯವಿರಲಿ. ಅದರತ್ತ ಗಮನ ಹರಿಸೋಣ. ಶ್ರಮಿಸೋಣ.

-ರತ್ನಾ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ