ಬಾಳಿಗೊಂದು ಚಿಂತನೆ (49) - ನುಡಿಗುಚ್ಛಗಳು

1. ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರಲಿ
2. ಮನಸ್ಸು ಸದಾ ಒಳ್ಳೆಯ ಚಿಂತನೆಗಳನ್ನು ಯೋಚಿಸುತ್ತಿರಲಿ.
3. ಮಾಡಿದ ಸೇವೆ, ಸಹಾಯ, ಉಪಕಾರ ವನ್ನು ಸ್ಮರಿಸೋಣ
4. ಕಷ್ಟ, ನೋವು, ಯಾತನೆಗಳಿಗೆ ಸ್ಪಂದಿಸುವುದನ್ನು ನಾವು ಸ್ವತಃ ಪಾಲಿಸಿ, ನಮ್ಮ ಮಕ್ಕಳಿಗೂ ತಿಳಿ ಹೇಳೋಣ.
5. ಮನೆಯ ಹಿರಿಯರು, ವೃದ್ಧರು, ನಮ್ಮ ಮನೆಯ ಆಸ್ತಿ, ಅವರನ್ನು ಪ್ರೀತಿಸಿ, ಗೌರವಿಸೋಣ.
6. ಹಾಗೆ ಕಿರಿಯರೆಂಬ ತಾತ್ಸಾರ ಬೇಡ, ಅವರಿಂದಲೂ ಕಲಿಯುವುದು ಬಹಳಷ್ಟಿದೆ.
7. ಸಜ್ಜನರನ್ನು ಯಾವತ್ತೂ ನಿಂದಿಸಬಾರದು.
8. ಪ್ರಾಜ್ಞನೆನಿಸಿದವನು ಇತರರಿಗೆ ಜ್ಞಾನ, ತಿಳುವಳಿಕೆ ವರ್ಗಾಯಿಸಬೇಕು, ಅದುವೇ ಈಶ್ವರ ಸೇವೆ ಮತ್ತು ಪೂಜೆ.
9. ವಿವೇಕಿಗಳಿಗೆ ಹಿಂದೆ ಆದದ್ದು, ಮುಂದೆ ಆಗುವುದು ಚಿಂತೆಯಿಲ್ಲ, ಅವರು ವರ್ತಮಾನದ ಬಗ್ಗೆ ನೋಡಿ ವ್ಯವಹರಿಸುವರು.
10. ಮದ, ಅಹಂಕಾರಗಳನ್ನು ಮೆಟ್ಟಿ ತಲೆಯೆತ್ತಿ ನಿಲ್ಲುವುದೇ ನಮಗಿರುವ ದೊಡ್ಡ ಸಂಪತ್ತು
-ರತ್ನಾ ಕೆ.ಭಟ್ ತಲಂಜೇರಿ
(ಅನುಭವ ಕಣಜ)