ಬಾಳಿಗೊಂದು ಚಿಂತನೆ - 52

ಬಾಳಿಗೊಂದು ಚಿಂತನೆ - 52

ಎಲ್ಲೋ ಓದಿದ ನೆನಪು.ಭಗವಂತ ೯೦% ಸುಖ, ೧೦% ದುಃಖ ಕೊಟ್ಟಿದ್ದಾನಂತೆ ನಮಗೆ. ಆದರೆ ನಾವು ಏನು ಮಾಡ್ತೇವೆ, ಈ ೧೦% ದುಃಖದ ಚಿಂತೆಯಲ್ಲಿ ೯೦% ಸುಖವನ್ನು ಮಣ್ಣು ಗೂಡಿಸ್ತಾ ಇದ್ದೇವೆ.

ಸಧ್ಯದ ಪರಿಸ್ಥಿತಿ ಯನ್ನೇ ನೋಡೋಣ.ಬಂದಾಗಿದೆ,  ಏನೂ ಮಾಡಲಾಗದು. ಹಾಗೆಂದು ಚಿಂತೆ ಮಾಡಿದರೆ ಏನು ಪ್ರಯೋಜನ? ಜಾಗೃತೆ ಮಾಡಲೇ ಬೇಕಲ್ಲವೇ? ಪ್ರತಿಯೊಂದು ವಿಷಯವೂ ಹೀಗೆ. ನಾಳೆ ಎನ್ನುವುದರ ನಿರೀಕ್ಷೆ ಬೇಕು, ಹಾಗೆಂದು ಇಂದಿನ ದಿನ ಚೆನ್ನಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಿನ್ನೆಯದ್ದು ಮುಗಿಯಿತು. ಅದನ್ನೇ ಯೋಚಿಸಿ ಕೊರಗುವುದು ಬೇಡ. ನಾವೇನು ಮಾಡ್ತೇವೆ, ವರ್ತಮಾನವನ್ನು ಭೂತ ಭವಿಷ್ಯತ್ ಗಳ ನೆನಪಲ್ಲಿ ಕಳೆದುಕೊಳ್ತಾ ಇದ್ದೇವೆ.

ಇಲ್ಲಿ ಮಾಡಬೇಕಾದ್ದು ಇಷ್ಟೇ, ಅಪೇಕ್ಷೆಗಳು, ಬೇಡಿಕೆಗಳನ್ನು ತಿರ‌ಸ್ಕಾರ ಮಾಡೋಣ ಆಗ ಎಲ್ಲ ಸರಿಯಾಗುತ್ತದೆ. ಇಲ್ಲಿ ಬೇಕು ಬೇಕು  ಹೇಳುತ್ತೇವಲ್ಲ, ಅದುವೇ ಬಡತನಕ್ಕೆ ಮುಖ್ಯ ಕಾರಣ, ಸಾಕು ಹೇಳೋಣ. ಇದ್ದುದರಲ್ಲಿಯೇ ಶ್ರೀಮಂತಿಕೆ ಸಿಗುತ್ತದೆ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ