ಬಾಳಿಗೊಂದು ಚಿಂತನೆ - 60
* ಮರ್ಯಾದೆ ಸಿಗದ ಜಾಗದಲ್ಲಿ ಚಪ್ಪಲಿಯನ್ನು ಸಹ ಇಡಬಾರದು.
* ದುಡ್ಡಿಲ್ಲದವ ಬಡವನಲ್ಲ. ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ. ಮೊದಲು ಎಲ್ಲರೂ ಚಾರಿತ್ರ್ಯ ಸರಿ ಇರುವಂತೆ ನೋಡಿಕೊಳ್ಳೋಣ.
* ಶೀಲವೇ ಬಹು ದೊಡ್ಡ ಸಂಪತ್ತು. ಅದುವೇ ಇಲ್ಲದವರಿಗೆ, ಬೇರೆ ಏನಿದ್ದರೂ ನಗಣ್ಯ. ಶೀಲವು ನವರತ್ನಗಳಿಗಿಂತಲೂ ಮಿಗಿಲು.
* ಸಾಲ ಮಾಡಿ ಶೂಲಕ್ಕೇರದಿರಿ. ಸಾಧಿಸಿ, ಹಿಂತಿರುಗಿ ನೋಡದಿರಿ, ಸದಾ ಮುನ್ನುಗ್ಗಿ.
* ಭೀತಿಯೇ ದುಃಖಕ್ಕೆ ಕಾರಣ. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ಹೋರಾಡಿ.
* ಆತ್ಮವಿಶ್ವಾಸವೇ ನಮ್ಮ ಪರಮಾಪ್ತ ಸ್ನೇಹಿತ.
* ಪರಿಪೂರ್ಣತೆಯೇ ನಮ್ಮ ಯಶಸ್ಸಿನ ಮೆಟ್ಟಿಲು.
* ಜೀವನದಲ್ಲಿ ಸೋತೆ ಎಂದು ದುಃಖಿಸದೆ, ಬೆಳಕಿನ ದಾರಿ ಅರಸುವುದ ಕಲಿಯಬೇಕು.
* ಬಡತನ ಎಂಥ ಕಾಠಿಣ್ಯವನ್ನು ಬೇಕಾದರೂ ಕಲಿಸುತ್ತದೆ.
* ಗುರುಹಿರಿಯರಿಗೆ ತಲೆಬಾಗು, ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡದೆ, ತಲೆಯೆತ್ತಿ ನಡೆ.
* ಹಸಿವಿಗೆ ಎಷ್ಟು ಬೇಕೋ ಅಷ್ಟೇ ಉಣ್ಣು. ಉಳಿದದ್ದು ನಮ್ಮದಲ್ಲ.
* ಕೋಪದಲ್ಲಿ ಕೊಯಿದ ಮೂಗು ಮತ್ತೆ ಬಾರದು.
* ಅವಹೇಳನ, ಅಪಹಾಸ್ಯ, ಉದ್ಧಟತನ ಅಣ್ಣ ತಮ್ಮಂದಿರು. ಅವುಗಳ ಸ್ನೇಹ ಮಾಡುವಾಗ ಜಾಗ್ರತೆ ಮತ್ತು ಆಲೋಚನೆಯಿಂದ ವ್ಯವಹರಿಸು.
ಆಕರ:ನಿತ್ಯ ವಾಣಿ ಸಂಗ್ರಹ
-ರತ್ನಾ ಭಟ್.ತಲಂಜೇರಿ
ಚಿತ್ರ: ಜಾನೆಟ್, ಮಂಗಳೂರು