ಬಾಳಿಗೊಂದು ಚಿಂತನೆ - 65
ಹಾಸಿಗೆ ಇದ್ದಷ್ಟೇ ಕಾಲುಚಾಚೋಣ. ನಮ್ಮಲ್ಲಿ ಎಷ್ಟು ಸಾಮರ್ಥ್ಯ ಇದೆಯೋ ಅಷ್ಟೇ ಸಾಕು. ಇತರರ ಸೊತ್ತು ನಮಗೆ ಬೇಡ. ಬದುಕಿನಲ್ಲಿ ಯಾದರೂ, ಬರವಣಿಗೆಯಲ್ಲಿಯಾದರೂ ಸಹ. ಐದೂ ಬೆರಳುಗಳು ಹಾಗಿಲ್ಲವಲ್ಲ. ಒಬ್ಬರು ಸ್ವಲ್ಪ ಹೆಚ್ಚು ಬುದ್ಧಿವಂತರಿರಬಹುದು. ಇನ್ನೊಬ್ಬರು ಕಡಿಮೆ ಇರಬಹುದು. ಇತರರ ಬರಹಗಳು ನಮಗೇತಕೆ? ಅನುಕರಣೆ ತಪ್ಪಲ್ಲ. ನಕಲು ಯಥಾವತ್ತಾಗಿ ಮಾಡಿ ತನ್ನದೇ ಎಂಬ ವಾದ ತಪ್ಪು. ಅವರವರ ತಿಳುವಳಿಕೆಯ ಮಟ್ಟಕ್ಕೆ ಬರೆಯೋಣ. ತಪ್ಪು ಒಪ್ಪುಗಳಿರಲಿ. ತಪ್ಪಾದರೆ ತಿದ್ದಿ ಹೇಳಿದ್ದನ್ನು ಮನಸಾರೆ ಒಪ್ಪಿಕೊಳ್ಳುವ ಗುಣವಿರಬೇಕು. ತಿದ್ದಿ ಮುಂದೆ ಹೋಗೋಣ. ಬೇಗ ಹೆಸರು ಗಳಿಸಬೇಕೆಂಬ ಆತುರ ಯಾಕೆ? ನಿಧಾನವಾದರೆ ಏನು ತೊಂದರೆ ಇದೆ ಹೇಳಿ? ಬದುಕಿನ ಹಾದಿಯಲಿ ಸಹ ನಮ್ಮ ಹತ್ತಿರ ಇರುವಷ್ಟೇ ವ್ಯವಹಾರ ಮಾಡಬೇಕು. ಬೇರೆಯವರ ಬದುಕಿನ ಮಟ್ಟ ನಮಗ್ಯಾಕೆ? ನಾವು ನಮ್ಮ ಜೀವನ. ನೆಮ್ಮದಿ ಮುಖ್ಯ. ನೆಮ್ಮದಿ ಇಲ್ಲದ ಜೀವನ ಬರಿಯ ಗೋಳೆಂಬ ಅರಿವು ಯಾಕಿಲ್ಲ? ಇದೇ ರೀತಿ ಬೇರೆಯವರ ಬರಹಗಳನ್ನು ಯಥಾವತ್ತಾಗಿ ಬರೆದು, ಎಲ್ಲರಿಗೂ ಗೊತ್ತಾದಾಗ ಎಷ್ಟು ನಾಚಿಕೆ, ಮರ್ಯಾದೆ ಹೋದಾಗ, ಮುಂದೆ ಸಿಗುವ ಹಣೆಪಟ್ಟಿಯ ಬಗ್ಗೆ ಸ್ವಲ್ಪ ಆಲೋಚನೆ ಬೇಡವೇ? ‘ಇದ್ದುದರಲ್ಲಿಯೇ ನಮ್ಮ ಸುಂದರ,ಆರೋಗ್ಯಕರ ಬದುಕನ್ನು ನಾವು ಬಾಳೋಣ’
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ