ಬಾಳಿಗೊಂದು ಚಿಂತನೆ - 79

ಬಾಳಿಗೊಂದು ಚಿಂತನೆ - 79

ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊಂದು ತಂಪಾಗಿಸುತ್ತನಲ್ಲವೇ? ತಮ್ಮ ತಮ್ಮ ಕಾಯಕ ಯಾರು ಬರಲಿ ಹೋಗಲಿ, ಏನೂ ಬೇಕಾದರೂ ಘಟಿಸಲಿ ನಿರಂತರ ಶ್ರದ್ಧೆ ಯಿಂದ ಮಾಡುವುದೇ ಧರ್ಮ‌. ಮಾನವರಾಗಿ ಬುವಿಗೆ ಬಂದ ನಮಗೆಲ್ಲ ಈ ಪ್ರಕೃತಿ ಕಲಿಸಿದ ಪಾಠವಿದು. ಆಕಾಶ, ಭೂಮಿ, ಮಳೆ, ಗಾಳಿ, ಬಿಸಿಲು, ತಂಪು, ಜಲ, ವಾಯು, ಮಣ್ಣು, ಹಸಿರು ಸಸ್ಯಗಳು, ಋತುಗಳು, ಪ್ರಾಣಿಗಳು ಎಲ್ಲದಕ್ಕೂ ನಾವು ಋಣಿಯಾಗಿರಬೇಕು. ಮಹಾತ್ಮರು ತಮಗೆಂದು ಯಾವುದನ್ನೂ ಉಳಿಸಿಕೊಳ್ಳಲಾರರು. ತಮ್ಮಿಂದ ಆದಷ್ಟೂ ಇತರರಿಗೆ ಒಳ್ಳೆಯದನ್ನೇ ಬಯಸುವರು. ಕೆಟ್ಟಹಾದಿಯಲ್ಲಿ ನಡೆಯುವವರನ್ನು ಸರಿ ದಾರಿಯಲ್ಲಿ ಹೋಗುವಂತೆ ಪ್ರೇರೇಪಿಸುವರು. ನಾವು ಸಹ ನೂರಕ್ಕೆ ನೂರು ಸಾಧ್ಯವಾಗದಿದ್ದರೆ ಬೇಡ, ಕಿಂಚಿತ್ ಸಹಕರಿಸೋಣ, ಬದುಕು ಸಾರ್ಥಕ ಪಡಿಸಿಕೊಳ್ಳೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ