ಬಾಳಿಗೊಂದು ಚಿಂತನೆ - 95

ಬಾಳಿಗೊಂದು ಚಿಂತನೆ - 95

ಸರ್ವಧರ್ಮಗಳಲ್ಲಿ ಅತಿಶ್ರೇಷ್ಠವಾದುದು ‘ಮಾತಾಪಿತ್ರೋರ್ಗುರೂಣಾಂ ಚ ಪೂಜಾ ಗರಿಯಸೀ’ - ತಾಯಿ ತಂದೆ ಮತ್ತು ಗುರುಗಳ ಸೇವೆಗಿಂತ ಅತಿಶ್ರೇಷ್ಠವಾದ ಧರ್ಮಾಚರಣೆ ಬೇರೊಂದಿಲ್ಲ. ಈ ಮೂವರನ್ನು ನೋಡದವನು, ಗೌರವಿಸದವನು, ತಿರಸ್ಕರಿಸುವವನು ಮಾಡುವ ದೇವತಾಕಾರ್ಯಗಳೆಲ್ಲ ನಿಷ್ಪಲ.’ನಾಸ್ತಿ ಮಾತೃಸಮೋ ಗುರುಃ’ ತಾಯಿಗೆ ಸಮಾನವಾದ ಗುರು ಮತ್ತೊಬ್ಬರಿರಲು ಸಾಧ್ಯವಿಲ್ಲ. ಈ ಪ್ರಪಂಚದಲ್ಲಿ ‘ಮನೆಯೇ ಮೊದಲ ಪಾಠಶಾಲೆ, ಜನನೀ ತಾನೇ ಮೊದಲಗುರು’ ಗಾದೆ ಸುಮ್ಮನೆ ಮಾಡಿದ್ದಲ್ಲ. ಸತ್ಯವಾದ ವಿಷಯಗಳನ್ನು ಅನುಭವಿಸಿ ಹೊರಹೊಮ್ಮಿದವೇ ಗಾದೆಗಳು. ಯಾವುದೇ ಸಂದರ್ಭದಲ್ಲೂ ತಾಯಿ ತಂದೆ ಮತ್ತು ಗುರುವಿಗೆ ಅವಮಾನ ಮಾಡಬಾರದು.

(ಆಕರ:ಮಹಾಭಾರತ)

ಸಂಗ್ರಹ: ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ